ವಿಟ್ಲ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ವಿಟ್ಲ ನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ ‘ಗೋ ಪೂಜೆ’ ಕಾರ್ಯಕ್ರಮ ಒಬಿಸಿ ಮೋರ್ಚಾ ಅಧ್ಯಕ್ಷರಾದ ಲೋಕೇಶ್ ಕಾಮಟ ರವರ ಮನೆಯಲ್ಲಿ ನಡೆಯಿತು.
ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಕೃಷ್ಣ ವಿಟ್ಲ ಗೋವಿನ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ರಾಮದಾಸ್ ಶೆಣೈ, ಒಬಿಸಿ ಮೋರ್ಚಾ ಮಂಡಲ ಉಪಾಧ್ಯಕ್ಷ ಉದಯ ಕುಮಾರ್ ಆಲಂಗಾರ್, ಮೋರ್ಚಾದ ಮಂಡಲ ಕಾರ್ಯಕಾರಿಣಿ ಸದಸ್ಯ ರಾಜೇಶ್ ಬೊಬ್ಬೆಕೇರಿ, ಶಕ್ತಿಕೇಂದ್ರದ ಶರತ್ ಎನ್ಎಸ್, ವಾರ್ಡ್ ಅಧ್ಯಕ್ಷ ಪುರುಷೋತ್ತಮ ಕಾಮಟ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೋಚೋಡಿ, ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.