ಮಡಿಕೇರಿ: ಟಿಪ್ಪು ಜಯಂತಿಯ ಕರಾಳ ನೆನಪು ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಇಂದು ನಿಷೇಧಾಜ್ಞೆ ಜಾರಿಯಲ್ಲಿದೆ. ನ. 10 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ವರೆಗೂ 144 ಸೆಕ್ಷನ್ ಜಿಲ್ಲಾಧಿಕಾರಿ ಜಾರಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.
ಕೆಎಸ್ಆರ್ ಪಿ, ಡಿಎಆರ್, ಕ್ಷಿಪ್ರ ಕಾರ್ಯಪಡೆ ಪೊಲೀಸರಿಂದ ಜಿಲ್ಲೆಯಾದ್ಯಂತ ಭದ್ರತೆ ಬಲಪಡಿಸಲಾಗಿದೆ.
ಜಿಲ್ಲೆಯಾದ್ಯಂತ ಜಿಲ್ಲಾಡಳಿತ ವತಿಯಿಂದ ಇಂದು ರಾಜಕೀಯ ಸಭೆ, ಸಮಾರಂಭ, ಪ್ರತಿಭಟನೆ, ಧರಣಿ, ಮೆರವಣಿಗೆ, ಉದ್ರಿಕ್ತ ಭಾಷಣ ನಿಷೇಧ ಹೇಳಲಾಗಿದೆ.
ಈ ಮಧ್ಯೆ ಟಿಪ್ಪು ಜಯಂತಿಯಂದು ಮೃತಪಟ್ಟ ಕುಟ್ಟಪ್ಪ ಸ್ಮರಣಾರ್ಥ ಹಿಂದೂ ಪರ ಸಂಘಟನೆಗಳಿಂದ ಚೌಡೇಶ್ವರಿ ದೇವಸ್ಥಾನದಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ನಡೆಯುತ್ತಿರುವ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾಗಿಯಾಗಿದ್ದರು. ದೇವಸ್ಥಾನನ ಹೊರಗಡೆ ಪೊಲೀಸ್ ಬಂದೋಬಸ್ತ್ ಇದ್ದರೆ ಒಳಗಡೆ ಸಭೆ ನಡೆಯುತ್ತಿತ್ತು.
ಓಂಕಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹಲವಾರು ಹಿಂದೂ ಪರ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.ನಂತರ ಚೌಡೇಶ್ವರಿ ದೇವಾಲಯಲ್ಲಿ ಸಭೆ ಸೇರಿ ಹೊರ ಬರುವಾಗ ಇಲ್ಲಿನ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದರು ಎಂದು ತಿಳಿದು ಬಂದಿದೆ.