ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2021-22ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ವಿವೇಕಾನಂದ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಆಯ್ಕೆಯಾಗಿದ್ದಾರೆ.
ರಕ್ಷಕ-ಶಿಕ್ಷಕ ಸಂಘದ ರಚನೆ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಸಂಘ ಸಭೆಯಲ್ಲಿ ಆಯ್ಕೆ ಪ್ರಕಿಯೆ ನೆರವೇರಿತು. ಉಪಾಧ್ಯಕ್ಷರಾಗಿ ಸಂದರ್ಶಕ ಪ್ರಾಧ್ಯಾಪಕ ಜಯನಂದ ಪೆರಾಜೆ ಮತ್ತು ಪುತ್ತೂರಿನ ಉರ್ಮಾಲಿನ ಅನಿತಾ ಆರ್ ಶೆಟ್ಟಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮತ್ತು ಜೊತೆ ಕಾರ್ಯದರ್ಶಿಯಾಗಿ ಕನ್ಯಾನದ ಗುರು ಎಜುಕೇಷನ್ ಟ್ರಸ್ಟ್ ಶ್ರೀ ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಈಶ್ವರ ಪ್ರಸಾದ್ ಯು.ಎಸ್ ಹಾಗೂ ಪುತ್ತೂರಿನ ಬಪ್ಪಳಿಗೆಯ ಸಪ್ನಾ ಜಿ ಭಟ್ ನೇಮಕಗೊಂಡರು.
ಸುಮಾರು 27 ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ರಕ್ಷಕ- ಶಿಕ್ಷಕ ಸಂಘದ ನೂತನ ಅಧ್ಯಕ್ಷ ಶಿವಪ್ರಸಾದ್ ಕೆ. ಎಸ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ರಕ್ಷಕ-ಶಿಕ್ಷಕ ಸಂಘವು ಸದಾ ಕಾರ್ಯೋಮ್ಮುಖವಾಗಿರುತ್ತದೆ. ಕಾಲೇಜಿನ ಅಭಿವೃದ್ಧಿಗೆ ರಕ್ಷಕ-ಶಿಕ್ಷಕ ಸಂಘವು ಇನ್ನಷ್ಟು ಬಲ ತುಂಬುವ ಪ್ರಯತ್ನವನ್ನು ಮಾಡುತ್ತದೆ ಎಂದು ಎಲ್ಲರ ಸಹಕಾರವನ್ನು ಕೋರಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಮತ್ತು ಸಮಾಜ ಈ ನಾಲ್ಕು ವಿಭಾಗಗಳಿಂದ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾಲೇಜಿನ ಆಡಳಿತ ಮಂಡಳಿ ವಿಶೇಷ ಅನುದಾನ ಮತ್ತು ಪ್ರೋತ್ಸಾಹ ನೀಡಲು ಸದಾ ಸಿದ್ದ ಎಂದರು.
ಮಹೇಶ ನಿಟಿಲಾಪುರ
ಜಯನಂದ ಪೆರಾಜೆ
2020-21ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಡಾ. ಶಶಿಧರ ಕಜೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಗತವರ್ಷದ ಆಯವ್ಯಯ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. 2021-22 ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಚಾಲಕ ಸಂತೋಷ್ ಬಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ದಯಾಮಣಿ ನಿರೂಪಿಸಿದರು. ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಆಂಗ್ಲ ವಿಭಾಗದ ಉಪನ್ಯಾಸಕ ಪರಮೇಶ್ವರ ಶರ್ಮ ವಂದಿಸಿದರು.
ಶಿವಪ್ರಸಾದ್ ಕೆ. ಎಸ್
ಈಶ್ವರ ಪ್ರಸಾದ್
ಅನಿತಾ ಆರ್ ಶೆಟ್ಟಿ
ಸಪ್ನಾ ಜಿ ಭಟ್