ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಸದಯ ಸ್ಯಾಂಡಲ್ವುಡ್ನ ಹಾಟ್ ಟಾಪಿಕ್ ಆಗಿದೆ. ಕಾರಣ ಚಿತ್ರದ ಒಂದು ರೊಮ್ಯಾಂಟಿಕ್ ಸಾಂಗ್. ಹೌದು ಈ ಹಾಡಿನಲ್ಲಿ ರಚ್ಚು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಫ್ಯಾನ್ಸ್ಗಳ ನಿದ್ದೆಗೆಡಿಸಿದ್ದಾರೆ.
ಲವ್ ಯು ರಚ್ಚು ಸಿನಿಮಾ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ರಚಿತಾ ರಾಮ್ ‘ಫಸ್ಟ್ ನೈಟ್ನಲ್ಲಿ ಏನ್ ಮಾಡ್ತೀರಾ’ ಎಂದು ಕೇಳಿ ಅಭಿಮಾನಿಗಳ ಹಾಳಾದ ಹೃದಯದ ಎದೆಬಡಿತವನ್ನು ಹೆಚ್ಚಿಸಿದ್ದಾರೆ. ಹೌದು ಸಿನಿಮಾದ ಮುದ್ದು ನೀನು ಎಂಬ ಹಾಡು ಇದೀಗ ರಿಲೀಸ್ ಆಗಿದ್ದು ಸಾಕಷ್ಟು ಸೌಂಡ್ ಮಾಡುತ್ತಿದೆ.ಈ ಚಿತ್ರದಲ್ಲಿ ರಚಿತಾ ಹಿಂದೆಂದೂ ಕಾಣಿಸಿಕೊಳ್ಳದಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮದವರು ನೀವು ಹಾಟ್ ಸೀನ್ಗಳಲ್ಲಿ ನಟಿಸಲ್ಲ ಎಂದವರು, ಇದೀಗ ಈ ಸಿನಿಮಾದಲ್ಲಿ ಅಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಏನು ಗೊತ್ತಾ? ಯೆಸ್ ನಾನು ಹೇಳಿದ್ದೆ ಆದರೆ ನಟಿಸಿದ್ದೇನೆ ಅಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದೆ ಅಂತ ಅರ್ಥ.
ಈ ಚಿತ್ರದಲ್ಲಿ ನಾನು ಯಾಕೆ ಅಷ್ಟು ಹಾಟ್ಆಗಿದ್ದೇನೆ ಗೊತ್ತಾ.. ‘ಫಸ್ಟ್ನೈಟ್ನಲ್ಲಿ ಏನ್ ಮಾಡ್ತಾರೆ ಅದೇ ರೋಮ್ಯಾನ್ಸ್ ಅಲ್ವಾ’.. ‘ನಾವು ಮಾಡಿದ್ದು ಅದನ್ನೇ’.. ಈ ಚಿತ್ರದಲ್ಲಿ ಪಾತ್ರದ ಸಂದರ್ಭಕ್ಕನುಗುಣವಾಗಿ ನಾನು ನಟಿಸಿದ್ದೇನೆ. ನೀವು ಚಿತ್ರ ನೋಡಿದಾಗ ನಾನು ಹಾಟ್ ಆಗಿ ನಟಿಸಲು ಕಾರಣ ಏನೆಂಬುದು ಗೊತ್ತಾಗುತ್ತದೆ ಎಂದರು.