ಉಪ್ಪಿನಂಗಡಿ: ಕಾಲೇಜ್ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಜಗಳ ನಡೆದು ಇತ್ತಂಡದವರು ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ಭಿನ್ನಕೋಮಿಗೆ ಸೇರಿದ ಯುವಕರ ಮಧ್ಯೆ ಜಗಳ ನಡೆದಿದ್ದು, ಒಂದು ತಂಡದ ಮೂವರು ಹಾಗೂ ಇನ್ನೊಂದು ತಂಡದ ಇಬ್ಬರು ಸೇರಿ ಒಟ್ಟು ಐವರು ಯುವಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೂ ಕೇಸು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಜಗಳಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.