ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್(ಮಾಮ್) ಆಫ್ ಮಂಗಳಗಂಗೋತ್ರಿ ಸಂಘಟನೆ ವತಿಯಿಂದ ಪ್ರತಿವರ್ಷದಂತೆ ನೀಡಲಾಗುವ `ಮಾಮ್ ಇನ್‌ಸ್ಪೈರ್ ಅವಾರ್ಡ್’ ಕಾರ್ಯಕ್ರಮ ನ. 22ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ.
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ: ಶ್ರೀರಕ್ಷಾ ರಾವ್ ಪುನರೂರು, ಆಳ್ವಾಸ್ ಕಾಲೇಜು ಮೂಡಬಿದ್ರಿ. ಶ್ರೀರಕ್ಷಾ ಅವರು ಮೂಲ್ಕಿ ಸಮೀಪ ಪುನರೂರಿನವರು. ಆಳ್ವಾಸ್ ರಂಗ ಅಧ್ಯಯನದ ವಿದ್ಯಾರ್ಥಿನಿ. ಬೀದಿ ನಾಟಕ , ತುಳು, ಕನ್ನಡ ನಾಟಕಗಳಲ್ಲಿ ಅಭಿನಯಿಸಿದವರು. ಇದೀಗ ಬೆಂಗಳೂರಿನ ಮಸ್ತ್ ಮಗಾ ಡಾಟ್ ಕಾಂ ಡಿಜಿಟಲ್ ಮಾಧ್ಯಮದಲ್ಲಿ ನಿರೂಪಕಿಯಾಗಿದ್ದಾರೆ.
ಪದವಿ ವಿಭಾಗ: ದುರ್ಗಾ ಪ್ರಸನ್ನ, ಆಳ್ವಾಸ್ ಕಾಲೇಜು ಮೂಡಬಿದಿರೆ. ಮೂಲತಃ ಕಾಸರಗೋಡು ಜಿಯ ಪೆರ್ಲದವರು. ತಂದೆ ಶ್ರೀಪತಿ ಭಟ್ ಬೊಳ್ಳುರೋಡಿ ಹಾಗೂ ತಾಯಿ ಇಂದಿರಾ. ಪ್ರಸ್ತುತ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಪದವಿ ವಿದ್ಯಾಭ್ಯಾಸವನ್ನು ಕೂಡ ಆಳ್ವಾಸ್ ನಲ್ಲಿಯೇ ಪೂರೈಸಿದ್ದಾರೆ. ಕನ್ನಡ ಹಾಗೂ ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕಿ ಹಾಗೂ ತರಬೇತುದಾರರಾಗಿದ್ದಾರೆ. ಸುದ್ದಿವಾಣಿ ವೆಬ್‌ಸೈಟ್‌ನ ಸಂಪಾದಕಿಯಾಗಿದ್ದಾರೆ.
ಪ್ರಜ್ಞಾ ಓಡಿಲ್ನಾಳ (ದ್ವಿತೀಯ): ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದರು. ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಸ್ನಾತಕೋತ್ತರ ಪದವಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪುತ್ತೂರಿನ ಸ್ಥಳೀಯ ವಾಹಿನಿ ಝೂಮ್ ಇನ್ ಟಿವಿಯಲ್ಲಿ ನಿರೂಪಕಿ ಹಾಗೂ ವರದಿಗಾರ್ತಿ. ನಿರೂಪಕಿ, ಬರಹಗಾರ್ತಿಯಾಗಿ ಗುರುತಿಸಿಕೊಂಡವರು.