ವಿಟ್ಲ: ಬಂಟ್ವಾಳ ತಾಲೂಕು ವಿಟ್ಲದ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಉರುಳಿಗೆ ಚಿರತೆ ಸಿಲುಕಿದ್ದ ಘಟನೆ ನಡೆದಿದೆ.
ಹೀಗೆ ಸಿಲುಕಿರುವ ಚಿರತೆಯನ್ನು ಜಿಲ್ಲೆಯ ಖ್ಯಾತ ಪಶುವೈದ್ಯ ಡಾ. ಯಶಸ್ವಿ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿಯುವ ಮೂಲಕ ಪಿಲಿಕುಳಕ್ಕೆ ಸಾಗಿಸಲಾಗಿದೆ.