ಪುತ್ತೂರು, ೦೯ ಫೆಬ್ರವರಿ ೨೦೨೧ : ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಪುತ್ತೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯು ಅತ್ಯುತ್ತಮ ವೈದ್ಯರು ಮತ್ತು ವೈದ್ಯಕೀಯ ತಂಡ ಹಾಗೂ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ಉನ್ನತ ಮಟ್ಟದ ಚಿಕಿತ್ಸಾ ವಿಭಾಗದ ಸಾಮಾರ್ಥ್ಯಗಳನ್ನು ಹೊಂದಿರುವ ಟೆರ್ಸರಿ ಕೇರ್ ಆಸ್ಪತ್ರೆ. ಈಗ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದ ಸೇವೆಗಳನ್ನು ವಿಸ್ತರಿಸಿದೆ.
ಹೊಸ ಕೇಂದ್ರದ ಉದ್ಘಾಟನೆಯನ್ನು ಪುತ್ತೂರಿನ ಮಾನ್ಯ ಶಾಸಕ “ಶ್ರೀ ಸಂಜೀವ ವiಠಂದೂರು” ನಿರ್ವಹಿಸಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳು ಪುತ್ತೂರು ನಗರಸಭೆಯ ಅಧ್ಯಕ್ಷರಾದ “ಶ್ರೀ ಜೀವಂಧರ್ ಜೈನ್”, ಸುದ್ಧಿ ಬಿಡುಗಡೆಯ ಮುಖ್ಯ ಸಂಪಾದಕ “ಡಾ. ಯು ಪಿ ಶಿವಾನಂದ”, ರೋಟರಿ ಜಿಲ್ಲಾ ಗವರ್ನರ್ “ಎಂ ರಂಗನಾಥ್ ಭಟ್”, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ “ಡಾ. ಯು. ಶ್ರೀಪತಿ ರಾವ್” ಹಾಗೂ ಮಂಗಳೂರಿನ ಕೆಎಂಸಿ ಅಸ್ಪತ್ರೆಯ ಪ್ರಾದೇಶಿಕ ಮುಖ್ಯ ಕ್ಲಿನಿಕಲ್ ಸರ್ವೀಸಸ್ “ಡಾ. ಆನಂದ್ ವೇಣುಗೋಪಾಲ್” ಮತ್ತು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ “ಸಘೀರ್ ಸಿದ್ದಿಕಿ” ಸಹ ಉಪಸ್ಥಿತರಿದ್ದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ “ಡಾ. ಜೀದು ರಾಧಾಕೃಷ್ಣನ್” ಅವರು ಮಾತಾಡುತ್ತ “ಸೂಪರ್ ಸ್ಪೆಷಾಲಿಟಿಯ ಹಸ್ತಕ್ಷೇಪದೊಂದಿಗೆ ತಕ್ಷಣದ ತುರ್ತು ಆರೈಕೆಯ ಅಗತ್ಯವಿರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ನಾವು ನೋಡಿದ್ದೇವೆ, ಏನು ಮಾಡಬೇಕು ಅಥವಾ ಎಲ್ಲಿಗೆ ಹೋಗಬೇಕು ಎಂಬ ಅರಿವಿನ ಕೊರತೆಯಿಂದಾಗಿ ರೋಗಿಗಳು ಅವರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದರಿಂದ ಅವರ ಆರೋಗ್ಯದ ಕ್ಷೀಣತೆಗೆ ಕಾರಣವಾಗುತ್ತದೆ ಮತ್ತು ಆ ಸ್ಥಿತಿಯಲ್ಲಿ ಮತ್ತಷ್ಟು ತೊಂದರೆಗಳು ಅಥವಾ ಕೆಲವೊಮ್ಮೆ ಮರಣ ಕೂಡ ಸಂಭವಿಸಬಹುದು. ಸರಿಯಾದ ತುರ್ತು ಚಿಕಿತ್ಸೆಯ ಆರೈಕೆ ಉತ್ತಮ ಪ್ರೋಟೋಕಾಲ್‌ಗೆ ಕಾರಣವಾಗುತ್ತದೆ, ಅದು ರೋಗಿಗಳಿಗೆ ಸ್ಥಳಿಯವಾಗಿ ಚಿಕಿತ್ಸೆ ನೀಡುವುದು ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಗುಣವಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಶಸ್ತç ಚಿಕಿತ್ಸೆ ಮಾಡಿಸಬಹುದು. ಇದು ಸಮಯವನ್ನು ಉಳಿಸುವುದರ ಜೊತೆಗೆ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ”. ಎಂದು ವಿವರಿಸಿದರು.
ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ “ಡಾ. ಯು. ಶ್ರೀಪತಿ ರಾವ್”ರವರು ಮಾತಾಡುತ್ತ “ನಮ್ಮ ಆಸ್ಪತ್ರೆಯು 18 ವರ್ಷಗಳಿಂದ ಪುತ್ತೂರಿನ ಜನರಿಗೆ ಸೇವೆ ಸಲ್ಲಿಸಿದೆ. ನಮ್ಮ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೆ ಹೆಚ್ಚಿನ ಕಾಳಜಿ ನೀಡುವುದು ನಮ್ಮ ಪರಿಶ್ರಮ. ದಿನ ಕಳೆದಂತೆ ಆಸ್ಪತ್ರೆಯ ವಿವಿಧ ವಿಶೇಷತೆಗಳು ಮತ್ತು ಸೂಪರ್ ಸ್ಪೆಷಾಲಿಟಿ ವಿಭಾಗಗಳೊಂದಿಗೆ ನಮ್ಮ ಆಸ್ಪತ್ರೆಯು ಪ್ರಗತಿ ಸಾಧಿಸುವತ್ತ ಸಾಗುತ್ತಿದೆ. ಮತ್ತು ಆಸ್ಪತ್ರೆಯು ಈಗ 18ನೇ ವರ್ಷಕ್ಕೆ ಕಾಲಿಡುತ್ತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಪುತ್ತೂರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ತರುವ ಮೂಲಕ ನಮ್ಮ ಕ್ಯಾಂಪ್‌ಗೆ ಮತ್ತೊಂದು ಗರಿಯನ್ನು ಸೇರಿಸಿದ್ದೇವೆ. ಪುತ್ತೂರು ಮತ್ತು ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ”. ಎಂದು ಮನದಾಳದ ಮಾತುಗಳನ್ನು ಹಂಚಿಕೊ0ಡರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕ್ಲಿನಿಕಲ್ ಸರ್ವೀಸಸ್ “ಡಾ. ಆನಂದ್ ವೇಣುಗೋಪಾಲ್” ರವರು ವಿವರಿಸುತ್ತ “ಪ್ರತಿಯೊಬ್ಬರಿಗೂ ಅಗತ್ಯವಾದಾಗ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವುದು ನಮ್ಮ ಪ್ರಯತ್ನ. ತುರ್ತು ಸೇವೆಗಳ ಸೌಲಭ್ಯದೊಂದಿಗೆ ನಾವು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಓಪಿಡಿ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಕಾರ್ಡಿಯಾಲಜಿ, ನ್ಯೂರಾಲಜಿ, ಗ್ಯಾಸ್ಟೊಎಂಟರಾಲಜಿ, ಸರ್ಜಿಕಲ್ ಆಂಕೋಲಜಿ ತಜ್ಞರ ನೇಮಕಾತಿಯು ಸಮಾಲೋಚನೆಯ ಆಧಾರದ ಮೇಲೆ ನಡೆಯುತ್ತದೆ” ಎಂದು ವಿವರಿಸಿದರು.ಸಮ್ಮೇಳನವನ್ನು ಉದ್ದೇಶಿಸಿ ಮಾತಾನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ “ಸಘೀರ್ ಸಿದ್ದಿಕಿ”ಯವರು, “ ಜಾಗತೀಕ ಮಾನದಂಡಗಳಿಗೆ ಸಮನಾಗಿರುವ ಸೇವೆಗಳನ್ನು ಒದಗಿಸಲು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಸಹಭಾಗಿತ್ವವನ್ನು ಹೊಂದಲು ನಮ್ಮ ಬಳಿ ಸವಲತ್ತುಗಳಿವೆ. ಆರೋಗ್ಯ ರಕ್ಷಣೆಗೆ ಸಂಬAಧಿಸಿದAತೆ ಸಮಯೋಚಿತ ಚಿಕಿತ್ಸೆಯು ಬಹಳ ಮುಖ್ಯವಾಗಿದೆ. ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತುರ್ತು ಚಿಕಿತ್ಸೆಯನ್ನು ಪ್ರವೇಶಿಸುವಂತೆ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂಬುದನ್ನು ತಿಳಿಸಲು ನನಗೆ ತುಂಬ ಸಂತೋಷವಿದೆ” ಎಂದು ಹೇಳಿದರು.
ಪ್ರಗತಿ ಆಸ್ಪತ್ರೆಯ ಬಗ್ಗೆ :
೧೯೯೭ರಲ್ಲಿ ಪ್ರಗತಿಯು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಅಹ್ಮದ್ ಗೋಪುರಗಳ ಆವರಣದಲ್ಲಿ “ಪ್ರಗತಿ ಆಸ್ಪತ್ರೆ” ಎಂಬ ಹೆಸರಿನಲ್ಲಿ ಪಾದಾರ್ಪಣೆ ಮಾಡಿತು. ಅಂದಿನಿAದ ಪ್ರಗತಿ ಎಂಬ ಹೆಸರಿಗೆ ತಕ್ಕಂತೆ ಬೆಳೆಯುತ್ತಿದೆ. ೨೦೦೪ರಲ್ಲಿ ಪ್ರಗತಿ ಆಸ್ಪತ್ರೆಯನ್ನು ಬೇರೆ ಆವರಣಕ್ಕೆ ಸ್ಥಳಾಂತರಿಸುವುದರ ಜೊತೆಗೆ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯೆಂದು ನವೀಕರಿಸಲಾಯಿತು. ಇದರ ಮೂಲಕ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿರ್ಗತಿಕ ರೋಗಿಗಳಿಗೆ ಆಸ್ಪತ್ರೆಯು ಸೆಕೆಂಡರಿ ಕೇರ್ ಸೇವೆಗಳನ್ನು ಒದಗಿಸುತ್ತಿದೆ. ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಆರೋಗ್ಯ ಅಗತ್ಯಗಳಿಗಾಗಿ ತಾಂತ್ರಿಕವಾಗಿ ಸಮರ್ಥ ವೃತ್ತಪರರನ್ನು ಒದಗಿಸಲು ೨೦೧೩ರಲ್ಲಿ ಆಸ್ಪತ್ರೆಯು “ಪ್ರಗತಿ ಇನ್ಸಿ÷್ಟಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್” ಅನ್ನು ಪ್ರಾರಂಭಿಸಿ ಸುಮಾರು ೧೨೦ ವಿದ್ಯಾರ್ಥಿಗಳಿಗೆ ಓಟಿ ತಂತ್ರಜ್ಞಾನ ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಧ್ಯಯನವನ್ನು ಮಾಡುತ್ತಿದ್ದಾರೆ. ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್ಗೆ ಸಂಯೋಜಿತವಾಗಿದೆ. ೨೦೧೭ರಲ್ಲಿ ಆಸ್ಪತ್ರೆಯು ಪುತ್ತೂರು ಪ್ರದೇಶದಲ್ಲಿ ಮೊದಲ ಬಾರಿಗೆ ಓ.ಂ.ಃ.ಊ ಮಾನ್ಯತೆಯನ್ನು ಪಡೆದಿದೆ ಮತ್ತು ೨೦೨೦ರಲ್ಲಿ ನವೀಕರಣ ಕಾರ್ಯವಿಧಾನಗಳನ್ನು ತೃಪ್ತಿಕರವಾಗಿ ಪೂರೈಸಿದೆ.
ಡಾ ಸುಧಾ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ಯಾರಾ ಮೆಡಿಕಲ್ ನಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ದೀಕ್ಷಿತಾರವರನ್ನೂ ಸನ್ಮಾನಿಸಲಾಯಿತು. ಇನ್ನುಳಿದಂತೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ವರ್ಣೋದ್ಯಮಿ ಕೇಶವ ಪ್ರಸಾದ್ ಮುಳಿಯ, ಪೂಡಾದ ಸದಸ್ಯ ವಾಮನ್ ಪೈ, ಸುದಾನ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯೆ ಗೌರಿ ಬನ್ನೂರು, ರಾಜ್ಯ ಸಮಾಜ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷರಾದ ಹರ್ಷ ಕುಮಾರ್ ರೈ ಮಾಡಾವು, ಕಾರ್ಯದರ್ಶಿ ಉಮೇಶ್ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.