ಅಭಿವೃದ್ಧಿ ಪರ ಚಿಂತನೆ ಹಾಗೂ ಗ್ರಾಮ ಸ್ವರಾಜ್ಯದ. ಪರಿಕಲ್ಪನೆಯೊಡನೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಕೊಡುಗೆ ಅನನ್ಯವಾದುದು..
ಪುತ್ತೂರು ಕ್ಷೇತ್ರದ ಹೆಚ್ಚಿನ ರಸ್ತೆಗಳನ್ನು ಉನ್ನತೀಕರಿಸಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ಈಗಾಗಲೇ ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು 23 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಹೈಟೆಕ್ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ.
ಬಂಟ್ವಾಳದ ಮಾಣಿಲ ಕ್ಷೇತ್ರದ ಅಭಿವೃದ್ಧಿಗೆ ರೂ 1 ಕೋಟಿ ಅನುದಾನ,
ಕೋಟಿ ಚೆನ್ನಯ – ದೇಯಿ ಬೈದೆದಿ ಕ್ಷೇತ್ರ ಗೆಜ್ಜೆಗಿರಿಗೆ ರೂ. 2.05 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯ,
ಕಡಲತೀರದ ಭಾರ್ಗವ ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ,
ಪುತ್ತೂರು ಎಪಿಎಂಸಿ ಮೂಲಸೌಕರ್ಯಕ್ಕೆ ಅನುದಾನ,
ಪಡುಮಲೆ ಕೋಟಿಚೆನ್ನಯ ಕ್ಷೇತ್ರಕ್ಕೆ ಮಾಸ್ಟರ್ ಪ್ಲಾನ್ ತಯಾರಾಗಿದ್ಜು ಅದರ ಕೆಲಸಕ್ಕೂ ಸಹಕಾರ,
ಪ್ರಧಾನಮಂತ್ರಿ ಸಡಕ್ ರಸ್ತೆಗೆ 33 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ.
24×7 ಕುಡಿಯುವ ನೀರಿನ ಜಲಸಿರಿ ಯೋಜನೆಯು 113.08 ಕೋಟಿ ವೆಚ್ಚದಲ್ಲಿ ಅನುಷ್ಠಾನವಾಗಲಿದೆ.
ಪೆರ್ನೆ ಬಿಳಿಯೂರಿನಲ್ಲಿ ರೂ 46.70 ಕೋಟಿ ಮೊತ್ತದ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಚಾಲನೆ,
ಕೈಗಾರಿಕಾ ಹಬ್-ಕೃಷಿ ಅಭಿವೃದ್ಧಿಗೆ ಅನುಕೂಲ ವ್ಯವಸ್ಥೆ, ಉದ್ಯೋಗದ ಸೃಷ್ಟಿ,
ಮುಂದಿನ 50 ವರ್ಷಗಳ ಆಲೋಚನೆ ಇಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿ ಪುತ್ತೂರು ಕ್ಷೇತ್ರದಲ್ಲಿ ಜನರನ್ನು ಸಾಮಾಜಿಕ – ಆರ್ಥಿಕ – ಧಾರ್ಮಿಕ-ಸಾಂಸ್ಕೃತಿಕವಾಗಿ ತಲುಪಿ ಎಲ್ಲಾ ವಿಚಾರಗಳಲ್ಲೂ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿರುವ ಹೆಮ್ಮೆಯ ಶಾಸಕರಿವರು.ಕಾಲಕಾಲಕ್ಕೆ ಸರಕಾರದಿಂದ ಸಿಗುವ ಎಲ್ಲಾ ಅನುದಾನಗಳನ್ನು ಜನಸಾಮಾನ್ಯರಿಗೆ ಒದಗಿಸಿದ್ಧು ಅವುಗಳು ಈ ಕೆಳಗಿವೆ..
ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಶಾಸಕರು ಹಲವಾರು ರೀತಿಯ ಅನುದಾನಗಳನ್ನು 2020-21 ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ಅನುಸೂಚಿತ ಜಾತಿ/ ಗಿರಿಜನ ಉಪಯೋಜನೆ,
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ,
ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ,
ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಜಿಲ್ಲಾ ಮುಖ್ಯ ರಸ್ತೆ ಸೇತುವೆ ಸುಧಾರಣೆ ಯೋಜನೆಯಡಿ ಕುಕ್ಕುಪುಣಿ
ಸೇತುವೆ,
ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ ಅಪೆಂಡಿಕ್ಸ್-ಇ ಅನುದಾನದಲ್ಲಿ ಬಂಟ್ವಾಳ ತಾಲ್ಲೂಕು ಕಡೂರು –
ಕಾಂಞಂಗಾಡ್ ರಸ್ತೆಯಲ್ಲಿ ಅಡ್ಯನಡ್ಕದಿಂದ ಸಾರಡ್ಡವರೆಗೆ ರಸ್ತೆಯ ನವೀಕರಣ
ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ ಸೇತುವೆಗಳು ಅನುದಾನದಲ್ಲಿ ಸುಬ್ರಹ್ಮಣ್ಯ – ಮಂಜೇಶ್ವರ ರಾಷ್ಟ್ರೀಯ
ಹೆದ್ದಾರಿ 100 ಕಿ.ಮೀ.6850 ರಲ್ಲಿ ನೀರ್ಕಜೆ ಸಮೀಪ ಕಿರು ಸೇತುವೆ ಪುನರ್ ನಿರ್ಮಾಣ
ಲೋಕೋಪಯೋಗಿ ಇಲಾಖೆಯ ನಬಾರ್ಡ್ RIDF 24 ರಡಿ ಮುಡುಪಿನಡ್ಕ ರಸ್ತೆ ಅಭಿವೃದ್ಧಿ
ಲೋಕೋಪಯೋಗಿ ಇಲಾಖೆಯ 3054 ರಸ್ತೆ ಸುರಕ್ಷತಾ ಕಾಮಗಾರಿ ಯೋಜನೆಯಡಿ ಅಮೈನಡ್ಕ ಹಂಟ್ಯಾರ್ ಬೆಟ್ಟಂಪಾಡಿ ರಸ್ತೆ
ಅಭಿವೃದ್ಧಿ
ಲೋಕೋಪಯೋಗಿ ಇಲಾಖೆಯ 5054 ನಬಾರ್ಡ್ RIDF 24 ರಡಿ ದೇವಸ್ಯ ಸೇತುವೆ
ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತು ಯೋಜನೆಯಡಿ ಕಾಲುಸಂಕ ನಿರ್ಮಾಣ
ಲೋಕೋಪಯೋಗಿ ಇಲಾಖೆಯ 5054 ಜಿಲ್ಲಾ & ಇತರ ರಸ್ತೆ ಸುಧಾರಣೆ ಯೋಜನೆಯಡಿ
ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ 8443 ಠೇವಣಿ ಕೊಡುಗೆ ಮಳೆಹಾನಿ ಕಾಮಗಾರಿ
ಲೋಕೋಪಯೋಗಿ ಇಲಾಖೆಯ 2020-21 ನೇ ಸಾಲಿನ ರಾಜ್ಯ & ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣಾ ಅನುದಾನದಡಿ ಮಳೆಹಾನಿ
ಕಾಮಗಾರಿ
ಲೋಕೋಪಯೋಗಿ ಇಲಾಖೆಯ 2020-21 ನೇ ಸಾಲಿನ ರಾಜ್ಯ & ಜಿಲ್ಲಾ ಮುಖ್ಯರಸ್ತೆಗಳ, ಸೇತುವೆಗಳ, ಕಟ್ಟಡಗಳ
ನಿರ್ವಹಣಾ ಅನುದಾನ
ಲೋಕೋಪಯೋಗಿ ಇಲಾಖೆಯ 2019-20 ನೇ ಸಾಲಿನ ಲೆಕ್ಕಶೀರ್ಷಿಕೆ ರಡಿ ರಸ್ತೆ & ಸೇತುವೆ ಅಭಿವೃದ್ಧಿ
ಲೋಕೋಪಯೋಗಿ ಇಲಾಖೆಯ ಶಿಕ್ಷಣ ಯೋಜನೆಯಡಿ ಶಾಲಾ ಕಟ್ಟಡಗಳು
ಲೋಕೋಪಯೋಗಿ ಇಲಾಖೆಯ 4202 ನಬಾರ್ಡ್ RIDF 24 ಯೋಜನೆಯಡಿ ಕಾಲೇಜುಗಳ ತರಗತಿ ಕೊಠಡಿ ನಿರ್ಮಾಣ
ಬೆಟ್ಟಂಪ್ಪಾಡಿ, ವಿಟ್ಲ ಸರಕಾರಿ ಪ್ರದರ್ಜೆ ಕಾಲೇಜಿಗೆ ಕೊಠಡಿ & ಶೌಚಾಲಯ ಬ್ಲಾಕ್ ನಿರ್ಮಾಣ (ಕ.ಗಮಂ ಅನುಷ್ಟಾನ)
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಶಾಲಾ ಕೊಠಡಿ ನಿರ್ಮಾಣ ಅನುದಾನಗಳನ್ನು ಮಂಜೂರು ಮಾಡಿರುತ್ತಾರೆ. ಹೀಗೆ ಶಾಸಕರ ಅಭಿವೃದ್ಧಿಯ ಹೆಜ್ಜೆ ಗುರುತುಗಳು 429.30 ಕೋಟಿ ರೂಪಾಯಿ..ಹೀಗೆ ಪುತ್ತೂರಿನ ಜನಮೆಚ್ಚುಗೆ ಗಳಿಸಿರುವ ಶಾಸಕರು ಇನ್ನೂ ಹಲವು ಯೋಚನೆಗಳನ್ನು ಪುತ್ತೂರಿನ ಅಭಿವೃದ್ದಿಗಾಗಿ ಹೊರತರಲಿದ್ದಾರೆ.