ಉಪ್ಪಿನಂಗಡಿ: ಪತಿಯೋರ್ವ ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಗಂಭೀರಗೊಳಿಸಿದ ಘಟನೆ ಡಿ.28 ರಂದು ಮುಂಜಾನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಸಮೀಪ ನಡೆದಿದ್ದು, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪೆರ್ನೆ ಹನುಮಾಜೆ ನಿವಾಸಿ ಶ್ರೀನಿವಾಸ್ ಎಂಬವರು ತನ್ನ ಪತ್ನಿ ಲಕ್ಷ್ಮಿ(60) ಎಂಬವರಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.