ಕಾರವಾರ: ಪತಿಯೊಂದಿಗೆ ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಹನಿಮೂನ್‌ಗೆ ಬಂದ ನವವಿವಾಹಿತೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವವಿವಾಹಿತೆಯೊಬ್ಬಳು ಗೋವಾದಿಂದ ಪತಿಯೊಂದಿಗೆ ಮುರುಡೇಶ್ವರಕ್ಕೆ ಬಂದಿದ್ದು, ಈ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಪತಿ ಗೆಸ್ಟ್ ಹೌಸ್ ಗೆ ಹೋಗಿ ವಾಪಸ್ ಬಂದು ನೋಡಿದಾಗ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆ ಏಕಾಏಕಿ ಕಾಣೆಯಾಗಿದ್ದಾಳೆ.
ಗೋವಾದ ವಾಸ್ಕೋಡಗಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಕಾಣೆಯಾದ ಮಹಿಳೆಯಾಗಿದ್ದಾಳೆ. ಎಷ್ಟು ಹುಡುಕಿದರೂ ಮಹಿಳೆ ಪತ್ತೆಯಾಗಿಲ್ಲ. ಹೀಗಾಗಿ ಮುರುಡೇಶ್ವರ ಠಾಣೆಯಲ್ಲಿ ಆಕೆಯ ಪತಿ ದೂರು ದಾಖಲಿಸಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.