ಪುತ್ತೂರು:ಹಿಂದೂ ಜಾಗರಣ ವೇದಿಕೆ ವೀರಮಂಗಲ ಘಟಕ ವತಿಯಿಂದ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಪ್ರತಿಯೊಬ್ಬರು ತಿಳಿಯಬೇಕು ,ಸಮಾಜದ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದೊಂದಿಗೆ ಮನೆ ಮನಗಳಿಗೂ ಭಗವದ್ಗೀತೆ ಅಭಿಯಾನವು ವೀರಮಂಗಲ ವಿಷ್ಣುಮೂರ್ತಿ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಫೆ. 15 ರಂದು ನಡೆಯಿತು.
ಸರಸ್ವತಿ ವಿದ್ಯಾಸಂಸ್ಥೆ ನರಿಮೊಗರು ನ ಮುಖ್ಯಸ್ಥರಾದ ಅವಿನಾಶ್ ಕೊಡಂಕೀರಿಯವರು ಭಗವದ್ಗೀತೆಯ ಮಹತ್ವ ಮತ್ತು ಪಾರಾಯಣದ ಬಗ್ಗೆ ಉಪನ್ಯಾಸವನ್ನು ನೀಡಿದರು..ಊರಿನ ಎಲ್ಲಾ ಮನೆಗಳಿಗೂ ಉಚಿತವಾಗಿ ಭಗವದ್ಗೀತಾ ಪುಸ್ತಕವನ್ನು ಹಂಚಲಾಯಿತು.
ಹಿಂ ಜಾ ವೇ ವೀರಮಂಗಲ ಘಟಕದ ಅಧ್ಯಕ್ಷರು ಶೇಖರ್ ಆನಾಜೆ ,ಅಶ್ವತ್ ಗಂಡಿ ,ಪ್ರಶಾಂತ್ ಹೋಸವಕ್ಲು ,ಕರುಣಾಕರ ಆನಾಜೆ ,ರವೀಂದ್ರ ಕೈಲಾಜೆ ಉಪಸ್ಥಿತರಿದ್ದರು… ಯೋಗೀಶ್ ವೀರಮಂಗಲ ಕಾರ್ಯಕ್ರಮವನ್ನು ನಿರೂಪಿಸಿದರು.