ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿ ಆಯ್ಕೆ ಯಾದ ಶ್ರೀಮತಿ ಪುಷ್ಪ ನಡುಬೈಲು ಹಾಗು ನರಿಮೋಗ್ರು ಪಂಚಾಯತ್ ಉಪಾಧ್ಯಕ್ಷ ರಾಗಿ ಆಯ್ಕೆ ಯಾದ ಶ್ರೀ ಸುಧಾಕರ್ ಕುಲಾಲ್ ರವರಿಗೆ ಮೃತ್ಯುಂಜೇಶ್ವರ ದೇವಸ್ಥಾನ ದಲ್ಲಿ ಉತ್ಸವ ಸಮಿತಿ ವತಿಯಿಂದ ಗೌರವರ್ಪಣೆ ನೆಡೆಯಿತು. ಆಡಳಿತಧಿಕಾರಿ ತುಳಸಿ ಹಾಗು ಉತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಪುತ್ತಿಲ. ಹಾಗು ಸುಂದರ ಗೌಡ ನಡುಬೈಲು ಪುಷ್ಪ ರವರನ್ನು. ಹೂ ಹಾರ ಮತ್ತು ಶಾಲು ಹಾಕಿ. ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀ ಸುಧಾಕರ್ ಕುಲಾಲ್ ರವರನ್ನು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಕಣ್ಣರಾಯ ಮತ್ತು ಪಟ್ಟೆ ಸದಾಶಿವ ಶೆಟ್ಟಿ ಯವರು ಹಾರ ಹಾಕಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮ ದಲ್ಲಿ ಉತ್ಸವ ಸಮಿತಿ ಸದಸ್ಯರು ಹಾಗು ಭಕ್ತಾದಿಗಳು ಭಾಗವಹಿಸಿದ್ದರು.