ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯಾಚರಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 2021-2026ರ ಸಾಲಿನ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಿದ್ದು ಸಹಕಾರಿಯ ಅಧ್ಯಕ್ಷರಾಗಿ ಶ್ರೀ ಎಸ್ ಆರ್ ಸತೀಶ್ಚಂದ್ರ ಇವರು ಪುನರಾಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಸುಳ್ಯ ನೆಲ್ಲೂರು ಕೆಮ್ರಾಜೆಯ ಶ್ರೀ ಉಮೇಶ್ ಪ್ರಭು ಕೆ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಶ್ರೀ ದೇವಿಪ್ರಸಾದ್ ಕೆ, ಮಂಗಳೂರಿನ ಶ್ರೀ ಜಯರಾಮ ಪಿ, ಪುತ್ತೂರಿನ ನಿಡ್ಪಳ್ಳಿ ಗ್ರಾಮದ ಶ್ರೀ ಕೆ ಹರೀಶ್ ಬೋರ್ಕರ್, ಪುತ್ತೂರಿನ ಕೋಡಿಂಬಾಡಿ ಗ್ರಾಮದ ಶ್ರೀ ಕೆ ಬಾಲಕೃಷ್ಣ ಬೋರ್ಕರ್, ಪುತ್ತೂರಿನ ಇರ್ದೆ ಗ್ರಾಮದ ಶ್ರೀ ರಾಜಗೋಪಾಲ ಬಿ, ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಶ್ರೀ ರಮೇಶ್ಚಂದ್ರ ಎಂ, ಸುಳ್ಯ ಪಂಜಿಗಾರಿನ ಶ್ರೀ ಪ್ರಕಾಶ್ಚಂದ್ರ, ಸುಳ್ಯ ತಾಲೂಕಿನ ಕಂದಡ್ಕದ ಶ್ರೀ ಹೇಮಂತ ಕುಮಾರ್ ಕೆ ಆರ್, ಬಂಟ್ವಾಳ ವಿಟ್ಲ ಮುಡ್ನೂರಿನ ಶ್ರೀಮತಿ ಸರಸ್ವತಿ ಎನ್, ಪುತ್ತೂರಿನ ಆರ್ಯಾಪು ಗ್ರಾಮದ ಶ್ರೀಮತಿ ದೇವಕಿ ಕೆ ಇವರು ಆಯ್ಕೆಯಾಗಿರುತ್ತಾರೆ, ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಶ್ರೀ ಬಾಲಸುಬ್ರಹ್ಮಣ್ಯ ಕೆ ಎಸ್ ಹಾಗೂ ಸಹಾಯಕರಾಗಿ ಶ್ರೀ ನವೀನ್ ಕುಮಾರ್ ಇವರು ಸಹಕರಿಸಿದರು. ಸಹಕಾರಿಯು ಪ್ರಸ್ತುತ ರಾಜ್ಯಾದ್ಯಂತ 17 ಶಾಖೆಗಳನ್ನು ಹೊಂದಿದ್ದು ₹.206 ಕೋಟಿ ಠೇವಣಿ, ₹.160 ಕೋಟಿ ಸಾಲ ಹಾಗೂ 34,000 ಸದಸ್ಯರನ್ನು ಹೊಂದಿ ಸಹಕಾರಿ ಸೇವೆಗಳನ್ನು ನೀಡುತ್ತಿದೆ.