ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22 ರವರೆಗೆ ನಡೆಯಲಿದೆ.
ಜ.14 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಒಂಭತ್ತು ದಿವಸಗಳ ಕಾಲ ಉತ್ಸವಾದಿಗಳು ಜರಗಲಿದೆ.
ಜ.14 ರಂದು ಲಕ್ಷದೀಪೋತ್ಸವ, ಉತ್ಸವ ಬಲಿ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ನಡೆಯಲಿದೆ. ಜ.18 ರಂದು ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಾಯಾಗ ನಡೆಯಲಿದೆ ಹಾಗೂ ಬಯ್ಯದ ಬಲಿ ಉತ್ಸವ, ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮಿಸಲಿದೆ. ಜ.19 ರಂದು ಕೆರೆ ಆಯನ, ನಡು ದೀಪೋತ್ಸವ ನಡೆಯಲಿದೆ. ಜ.20 ರಂದು ಹೂ ತೇರು ನೆರವೇರಲಿದೆ. ಜ.21 ರಂದು ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, “ಮಹಾರಥೋತ್ಸವ” ನಡೆಯಲಿದೆ. ಜ.22 ರಂದು ಕವಟೋದ್ಘಾಟನೆ, ತುಲಾಭಾರ ಸೇವೆ, ಅವಭೃತ ಸ್ನಾನ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.