ಅಲೋಕ್. ಆರ್. ಬಾಬು. ಹಿಂಗ್ ಕರೆದ್ರೆ ಯಾರಿಗೂ ಗೊತ್ತಾಗಲ್ಲ ಬಿಡಿ. ಆದ್ರೆ ‘ಆಲ್ ಓಕೆ’ ಅನ್ನಿ ; ಸಿರಿಗನ್ನಡ ಯುವ ನವ ಮ್ಯೂಸಿಕ್ ಪ್ರೇಮಿಗಳ ಕಿವಿ ನಿಮಿರುವುದು. ಹಾಡುಗಳಲ್ಲೇ ಜೀವನದ ಗಾಯನವನ್ನ ಸೊಗಸಾಗಿ ಹೇಳೊದ್ರಲ್ಲಿ ಫಂಟರು ಆಲ್ ಓಕೆ ಬ್ರೋ. ಈ ಬಾರಿ ಆಲ್ ಓಕೆ ಹೊಸದೊಂದು ಜನ ಜೀವನದ ಕಥೆಯನ್ನ ಕವಿತೆಯಾಗಿ ಹೇಳಿದ್ದಾರೆ..
ಮನಸು ತುಂಬ ಮ್ಯೂಸಿಕ್, ಕನಸು ತುಂಬ ಸಿನಿಮಾ ರಂಗವನ್ನ ಇಟ್ಕೊಂಡು ಬೆಂಗಳೂರಿನ ಬನಶಂಕರಿಯಿಂದ ಗಾಂಧಿನಗರಕ್ಕೆ ಬಂದೌವ್ರು ಅಲೋಕ್ ಆರ್ ಬಾಬು ಅಲಿಯಾಸ್ ಆಲ್ ಓಕೆ. ಮೊದ ಮೊದಲು ಕನ್ನಡ ಆಡಿಯೋ ಲೋಕಕ್ಕೆ ಹಿಪ್ಪಾಪು, ಱಪ್ ಸಾಂಗ್ಗಳ ಆಲ್ಬಂ ಪ್ರಯತ್ನಗಳನ್ನ ಮಾಡಿದವರು ಇವ್ರು. ಈಗ ಆಲ್ ಓಕೆ ಕಡೆಯಿಂದ ಮ್ಯೂಸಿಕ್ ಪ್ರೇಮಿಗಳೆಲ್ಲ ಓಕೆ ಓಕೆ ಅಂದು ಮೆಚ್ಚಿ ಹಚ್ಚಿಕೊಳ್ಳುವ ಆಲ್ಬಂ ಸಾಂಗ್ ಒಂದು ರಿಲೀಸ್ ಆಗಿದೆ. ಆ ಹಾಡೇ ಯಾಕಿಂಗೆ ಪಾರ್ಟ್ 2.
ಯಾಕಿಂಗೆ.. ಈ ಜೀವ್ನ ಯಾಕಿಂಗೆ , ನನ್ನ ಲೈಫ್ನಲ್ಲೇ ಯಾಕ್ ಹಿಂಗೆ ಅಂತ ಎಲ್ಲರೂ ಆಗಾಗ ಸೋತಾಗ ಯೋಚ್ನೆ ಮಾಡೇ ಮಾಡ್ತಾರೆ.. ಅಂತಹ ಘಟನೆಗಳನ್ನ ಕವಿತೆಯನ್ನಾಗಿಸಿ ಇವತ್ತಿನ ಆಚಾರ ವಿಚಾರ ಪ್ರಚಾರ ಹೊಸ ಪ್ರಕಾರಗಳನ್ನ ಕವಿತೆಯನ್ನ ಸಾಲನ್ನಾಗಿಸಿ ಯಾಕಿಂಗೆ ಹಾಡನ್ನ ಮಾಡಿದ್ದಾರೆ ಆಲ್ ಓಕೆ…
ಆಲ್ ಓಕೆ ಕಡೆಯಿಂದ ಹೊರ ಬಂದಿರುವ ಹೊಸ ಆಲ್ಬಂ ಸಾಂಗ್ ಕೇಳುಗರನ್ನ ಇಂಪ್ರೇಸ್ ಮಾಡಿ ಹೆಚ್ಚೆಚ್ಚು ವೀಕ್ಷಣೆಯನ್ನ ಪಡೆಯುತ್ತಿದೆ. ಕನ್ನಡ ಆಡಿಯೋ ಕ್ಷೇತ್ರದಲ್ಲಿ ಮತ್ತಷ್ಟು ಇಂತಹ ಕ್ವಾಲಿಟಿ ಪ್ರಯತ್ನಗಳು ಆಗಬೇಕಿದೆ…
ಸದ್ಯ ಯಾಕಿಂಗೆ ಪಾರ್ಟ್ 2 ಆಲ್ಬಮ್ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಮ್ಯೂಸಿಕ್ ಪ್ರೇಮಿಗಳೆಲ್ಲಾ ಈ ಹಾಡಿಗೆ ಮನಸೋತಿದ್ದಾರೆ. ಬಿಗ್ ಬಾಸ್ ಸೀಸನ್ 8 ರ ಖ್ಯಾತಿಯ ಅರವಿಂದ್ ಮತ್ತು ದಿವ್ಯಾ ರವರು ಅಲೋಕ್ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಹಲವಾರು ಸೆಲೆಬ್ರೇಟಿಗಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಈ ಹಾಡಿನ ಮೂಲಕ ಮತ್ತೊಮ್ಮೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ಆಲ್ ಓಕೆ ಮಿಂಚಲಿದ್ದಾರೆ..