ವಿಟ್ಲ: ಕರ್ತವ್ಯದಲ್ಲಿದ್ದ ನನಗೆ ಮಾಜಿ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ಎಂಬವರ ವಿರುದ್ಧ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಚಂದಳಿಕೆ ಜನತಾ ಕಾಲೋನಿ ನಿವಾಸಿ ವೆಂಕಪ್ಪ ನಾಯ್ಕ್ ರವರ ಪುತ್ರ ರಾಜೇಶ್ ದೂರು ನೀಡಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ವಾಲ್‌ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ಪಟ್ಟಣ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ರೀಕೃಷ್ಣ ಎಂಬವರು ಸುಮಾರು 2 ವರ್ಷಗಳಿಂದ ಸಾರ್ವಜನಿಕರಿಗೆ ಸಂಬಂದಪಟ್ಟ ಕೆಲಸವನ್ನು ಮಾಡಿಕೊಂಡುತ್ತಿದ್ದು, ಜ.18 ರಂದು ಪಟ್ಟಣ ಪಂಚಾಯತ್ ನಲ್ಲಿ ಕರ್ತವ್ಯದಲ್ಲಿರುವ ಸಮಯ ಅಲ್ಲಿಗೆ ಬಂದ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ, ಬೆದರಿಸಿದ್ದಾರೆ.
ಶ್ರೀಕೃಷ್ಣ ರವರು ಸಾರ್ವಜನಿಕರ ರಾಜೀವ ಗಾಂಧಿ ವಸತಿ ನಿಗಮ ಸಂಬಂಧಿಸಿದ ಹಣ ಬಿಡುಗಡೆಯಾಗದೆ ಬ್ಯಾಂಕಿಗೆ ಜಮಾ ಆಗದ ಕಾರಣ ಈ ಕೃತ್ಯ ನಡೆಸಿದ್ದಾರೆ ಎಂದು ರಾಜೇಶ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.