ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ “ತೆಂಗು ರೈತ ಕಾರ್ಡ್” ಅನ್ನು ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಪುಣಚ , ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಹಾಗೂ ಎಲ್ಲಾ ರೈತ ಮುಖಂಡರುಗಳು ಸೇರಿ ಬಿಡುಗಡೆಗೊಳಿಸಿದರು.
ಸಂಸ್ಥೆಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ
ತೆಂಗು ರೈತರಿಗೆ ತೆಂಗು ರೈತ ಕಾರ್ಡನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ. ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮ್ ರಾಜ್ ಸುಳ್ಯ ತಾಲೂಕು ಸಂಸ್ಥೆಯ ಸಿಬ್ಬಂದಿಗಳು, ತಾಲೂಕು ರೈತ ವರ್ಗದವರು ಉಪಸ್ಥಿತರಿದ್ದರು.