ಬೆಳ್ತಂಗಡಿ: ತಾಲೂಕಿನ ನಿಡಿಗಲ್ ಸೇತುವೆಯ ಹತ್ತಿರದಲ್ಲಿರುವ ಪುರಾತನ ಕಾಲದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರವು ಭರದಿಂದ ಸಾಗುತ್ತಿದ್ದು, ಸುತ್ತು ಪೌಳಿಯ ಗೋಡೆಯ ಕೆಲಸವು ನಡೆಯುತ್ತಿದ್ದು, ಇದನ್ನು ರಾತ್ರಿ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಊರಿನ ದೇವಸ್ಥಾನದ ಭಕ್ತಾದಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃತ್ಯವೆಸಗಿದವರನ್ನು ಶೀಘ್ರ ಬಂಧಿಸಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಎಚ್ಚರಿಕೆ ನೀಡಿದೆ.