ಮಂಗಳೂರು: ಎರಡು ಬೇರೆ ಬೇರೆ ಆ್ಯಂಬುಲೆನ್ಸ್ಗಳಿಗೆ ಕಿಲೋಮೀಟರ್ಗಟ್ಟಲೇ ದಾರಿ ಬಿಡದೆ ಉದ್ಧಟತನದಿಂದ ವರ್ತಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೋನಿಶ್ ಬಂಧಿತ ಕಾರು ಚಾಲಕ. ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಉಡುಪಿಯವರೆಗೆ ಸುಮಾರು 30 ಕಿಲೋಮೀಟರ್ ಈತ ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿರಲಿಲ್ಲ. ಇದನ್ನು ಆ್ಯಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿ ವಿಡಿಯೋ ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ಗೂ ಈತ ದಾರಿ ಬಿಡದೆ ಸತಾಯಿಸಿದ್ದಾನೆ.
ಈತನ ದುರ್ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.