ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಕೋರ್ಜೆ ಕುಟುಂಬದ ಧರ್ಮದೈವಗಳನೇಮೋತ್ಸವ ಕೋರ್ಜೆ ತರವಾಡು ಮನೆಯಲ್ಲಿ ಮಾ.6 ಮತ್ತು 7ರಂದು ನಡೆಯಲಿದೆ.ಮಾ.6ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಹರಿಸೇವೆ, ಮುಡಿಪುಪೂಜೆ, ಪ್ರಸಾದ ವಿತರಣೆ, ಸಂಜೆ ದೈವಗಳ ಭಂಡಾರ ತೆಗೆದು ಕಲ್ಲುರ್ಟಿ ದೈವದ ನೇಮ,ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮ ಜರಗಲಿದೆ. ಮಾ.1ರಂದು ಬೆಳಿಗ್ಗೆ ಧರ್ಮದೈವಶಿರಾಡಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ತಂಬಿಲ ಸೇವೆನಡೆಯಲಿದೆ ಎಂದು ಕೋರ್ಜೆ ಕುಟುಂಬದ ತರವಾಡು ಮನೆಯ ಮಾಯಿಲಪ್ಪ ಗೌಡ,ಕುಟುಂಬದ ತಿಮ್ಮಪ್ಪ ಗೌಡ ಕಾಂತಿಲ, ಮುತ್ತಪ್ಪ ಗೌಡ ಕಾಂತಿಲ ತಿಳಿಸಿದ್ದಾರೆ.
ತುಳುವಿನಲ್ಲಿ ಆಮಂತ್ರಣ: ಕೊರ್ಚೆ ಕುಟುಂಬದ ನೇಮೋತ್ಸವದಆಮಂತ್ರಣವನ್ನು ವಿಶೇಷವಾಗಿ ತುಳು ಲಿಪಿ ಮತ್ತು ಭಾಷೆಯಲ್ಲಿ ಮುದ್ರಿಸಲಾಗಿದೆ.ತುಳುವಿನಲ್ಲಿ ಮಾಡಲಾದ ಆಮಂತ್ರಣ ಪತ್ರ ಎಲ್ಲರ ಗಮನ ಸೆಳೆದಿದೆ.
