ಪುತ್ತೂರು: ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ವತಿಯಿಂದ ಪಡುಮಲೆಯಲ್ಲಿ ಏಪ್ರಿಲ್ 23 ಮತ್ತು 24 ರಂದು ನಡೆಯುವ ಬ್ರಹ್ಮಕಲಶ ಸಂದರ್ಭಈ ಕ್ಷೇತ್ರದ ಅಭಿವೃದ್ಧಿಗಾಗಿ ರಚಿಸಲಾದ ‘ನಮ್ಮ ಪಡುಮಲೆ’ ಮನವಿ ಪತ್ರವನ್ನು ಬೈಪಾಸ್ -ಬಪ್ಪಳಿಗೆಯಲ್ಲಿನ ಪುತ್ತೂರು ಬಿಲ್ಲವ ಸಂಘದ ಮಾಸಿಕ ಸಭೆಯಲ್ಲಿ ಹಸ್ತಾಂತರಿಸಿ ತಮ್ಮೊಂದಿಗೆಕೈಜೋಡಿಸುವಂತೆ ಕೋರಲಾಯಿತು.
ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ನ ಅಧ್ಯಕ್ಷರೂ ಹಾಗೂ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳರವರು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷಜಯಂತ್ ನಡುಬೈಲುರವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಡುಮಲೆ ಕೋಟಿ-ಚೆನ್ನಯಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ವಿಜಯಕುಮಾರ್ಸೊರಕೆ, ಪುತ್ತೂರು ಸೀನಿಯರ್ ಬ್ರೇಕ್ ಇನ್ಸ್‌ಪೆಕ್ಟರ್ ಚರಣ್, ಪಡುಮಲೆ ಕೋಟಿ-ಚೆನ್ನಯ ಪುತ್ತೂರು ಸಮಿತಿ ಅಧ್ಯಕ್ಷ ವೇದನಾಥ ಸುವರ್ಣ, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿಶಶಿಧರ್ ಕಿನ್ನಿಮಜಲು, ಉಪಾಧ್ಯಕ್ಷರಾದ ಡಾ.ಸದಾನಂದ ಕುಂದರ್ ಹಾಗೂ ವಿನಯ ವಸಂತ್, ಕೋಶಾಧಿಕಾರಿ ನಾಗೇಶ್ ಬಲ್ನಾಡು, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್.ಸಿನಾರಾಯಣ್‌ರವರು ಉಪಸ್ಥಿತರಿದ್ದರು.