ಪುತ್ತೂರು: ನರಿಮೊಗರು ಬಜಪ್ಪಳ ಕೃಷ್ಣ ಬೈಪಾಡಿತ್ತಾಯರವರ ಸಹೋದರ ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯ ಶುಭಾ ಹರೀಶ್ ಬೈಪಾಡಿತ್ತಾಯರವರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ನಾಗಾಭರಣವನ್ನು ಮಾ.11 ರಂದು ಸಮರ್ಪಣೆ ಮಾಡಿದರು.

ಪುರುಷರಕಟ್ಟೆ ಜಂಕ್ಷನ್ ಬಳಿಯಿಂದ ನಾಗಾಭರಣವನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಜಪ್ಪಳ ಕುಟುಂಬಸ್ಥರಾದ ಕೃಷ್ಣ ಬೈಪಾಡಿತ್ತಾಯ ಬಜಪ್ಪಳ, ಶ್ರೀ ನಿಧಿ ಬೈಪಾಡಿತ್ತಾಯ ಬಜಪ್ಪಳ, ಕೇಶವ ಪ್ರಸಾದ್ ಬೈಪಾಡಿತ್ತಾಯ, ದೇವಸ್ಥಾನದ ಆಡಳಿತಾಧಿಕಾರಿ ತುಳಸಿ, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಜಾತ್ರೋತ್ಸವ ಸಮಿತಿ ಗೌರವ ಸಲಹೆಗಾರ ಅಶೋಕ್ ಕುಮಾರ್ ಪುತ್ತಿಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಹೇಶ್ಚಂದ್ರ ಸಾಲ್ಯಾನ್, ಜಾತ್ರೋತ್ಸವ ಸಮಿತಿ ಮಾಜಿ ಸದಸ್ಯ ಸುಂದರ ಗೌಡ, ವಸಂತ ಗೌಡ ಸೇರಾಜೆ, ಜನಾರ್ದನ ಜೊಯಿಷ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶುಭ ಹರೀಶ್ ಬೈಪಾಡಿತ್ತಾಯರವರು ಈ ಹಿಂದೆ ದೇವಸ್ಥಾನಕ್ಕೆ ಬೆಳ್ಳಿಯ ಕವಚವನ್ನು ಸಮರ್ಪಣೆ ಮಾಡಿದ್ದರು.

