ಬಂಟ್ವಾಳ: ತಾಲೂಕಿನ ಭಂಡಾರಿಬೆಟ್ಟು ವ್ಯಾಯಮ ಶಾಲೆಯಲ್ಲಿ ತುಳು ಲಿಪಿ ಪರೀಕ್ಷೆ ಬರೆದಿರುವ 72 ವರ್ಷದ ಲಕ್ಷ್ಮೀ ಎಂಬವರು ಯುವ ಸಮುದಾಯಕ್ಕೆ ಮಾದರಿ ಎನ್ನಿಸಿದ್ದಾರೆ. ತುಳು ಅಕಾಡೆಮಿ, ಜೈತುಳು ಸಂಘಟನೆ ಹಾಗೂ ಯುವಜನ ವ್ಯಾಯಮ ಶಾಲೆ ಭಂಡಾರಿಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ತುಳು ಲಿಪಿ ಪರೀಕ್ಷೆ ಭಂಡಾರಿ ಬೆಟ್ಟು ವ್ಯಾಯಾಮ ಶಾಲೆಯಲ್ಲಿ ರವಿವಾರ ನಡೆದಿದ್ದು, ಬಂಟ್ವಾಳ ತಾಲೂಕಿನ ಸಜೀಪಮುನ್ನೂರುವಿನ ಪಾಣೆಮಂಗಳೂರು ನಿವಾಸಿ ನಿವೃತ್ತ ಶಿಕ್ಷಕಿ ಎನ್.ಬಿ.ಲಕ್ಷ್ಮೀ ತುಳುಲಿಪಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.
ತುಳು ಅಕಾಡೆಮಿ, ಜೈತುಳು ಸಂಘಟನೆ ಹಾಗೂ ಯುವಜನ ವ್ಯಾಯಮ ಶಾಲೆ ಭಂಡಾರಿಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ “ಬಲೆ ತುಳು ಕಲ್ಪುಗ” ಉಚಿತ ತುಳು ಲಿಪಿ ಕಲಿಕಾ ಕಾರ್ಯಗಾರ ನಡೆಸಿದ್ದರು. ತುಳು ಲಿಪಿ ತರಗತಿ ನಾಲ್ಕು ವಾರಗಳ ಕಾಲ ನಡೆದು ಬಳಿಕ ಪರೀಕ್ಷೆ ನಡೆಸಲಾಗಿದೆ. ಆದರೆ 72 ವರ್ಷ ಪ್ರಾಯದ ಲಕ್ಮೀ ರವರು ಆನ್ ಲೈನ್ ಕ್ಲಾಸು ಮೂಲಕ ತರಬೇತಿ ಪಡೆದಿದ್ದು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು ಸೈ ಎನಿಸಿಕೊಂಡರು.
ತುಳು ಲಿಪಿ ಪರೀಕ್ಷೆಗೆ ಒಟ್ಟು 30 ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದಿದ್ದಾರೆ.ಅದರಲ್ಲಿ ಹಿರಿಯ 72 ವರ್ಷ ವಯಸ್ಸಿನ ಲಕ್ಮೀರವರು ಪರೀಕ್ಷೆ ಬರೆದು ಯುವಕರಿಗೆ ಹುರುಪು ತುಂಬಿದ್ದಾರೆ. ಅಮೂಲಕ ತುಳು ಕಲಿಕೆಗೆ ಹೆಚ್ಚಿನ ಮಹತ್ವ ಮತ್ತು ಬಳಕೆಗೆ ತರಲು ಸಹಕಾರ ಸಿಕ್ಕಿದೆ ಎಂದು ತುಳು ಲಿಪಿ ಶಿಕ್ಷಕಿ ಪೂರ್ಣಿಮಾ ಬಂಟ್ವಾಳ ತಿಳಿಸಿದ್ದಾರೆ. ನಾಲ್ಕು ರವಿವಾರ ಭಂಡಾರಿ ಬೆಟ್ಟು ವ್ಯಾಯಮ ಶಾಲೆಯಲ್ಲಿ ತುಳು ಲಿಪಿಯ ಬಗ್ಗೆ ಕ್ಲಾಸ್ ಮಾಡಿದ್ದೇವೆ, ಇನ್ನು ಉಳಿದಂತೆ ಆನ್ ಲೈನ್ ಕ್ಲಾಸ್ ಮೂಲಕವೂ ಶಿಕ್ಷಣ ನೀಡಿದ್ದೇವೆ. ತರಬೇತಿಯ ಬಳಿಕ ಪರೀಕ್ಷೆ ನಡೆಸಿದ್ದೇವೆ .ಉತ್ತಮ ವಾದ ಪ್ರೋತ್ಸಾಹ ಸಿಕ್ಕಿದೆ.ಎರಡು ದಿನಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದರು. ತುಳು ಲಿಪಿ ಶಿಕ್ಷಕರಾದ ಜಗದೀಶ್ ಗೌಡ ಕಲ್ಕಳ ಹಾಗೂ ಭವಿತಾ ಗೌಡ ಹಾಗೂ ಪೂರ್ಣಿಮಾ ಪರೀಕ್ಷೆ ಕೇಂದ್ರದಲ್ಲಿ ಉಪಸ್ಥಿತರಿದ್ದು ಪರೀಕ್ಷೆ ನಡೆಸಿಕೊಟ್ಟರು.