ಮಂಗಳೂರು: ಅಪರೂಪದ ಹಾರುವ 2 ವಿಶೇಷ ಮೀನುಗಳು ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ ‘ಫ್ಲೆಯಿಂಗ್ ಫಿಶ್’ ಹಾಗೂ ತುಳುವಲ್ಲಿ ‘ಪಕ್ಕಿಮೀನ್’ ಎಂದ ಕರೆಯಲಾಗುತ್ತದೆ.
ಈ ಕುರಿತು ಮೀನುಗಾರ ಲೋಕೇಶ್ ಬೆಂಗ್ರೆ ಮಾಹಿತಿ ನೀಡಿದ್ದು, ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿದ್ದು, ಇದು 15ರಿಂದ 45 ಸೆಂ.ಮೀ.ವರೆಗೆ ಉದ್ದವಾಗಿದೆ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತವೆ. ಆದರೆ ಅದನ್ನು ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎಂದರು.
ಇನ್ನು ಹಾರುವ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿರುವಂಥದಾಗಿದ್ದು, ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ.