ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕೆಲಸಗಳು ಭರದಿಂದ ಸಾಗುತ್ತಿದೆ, ಮಾ.7 ರಂದು ಲೋಕಾರ್ಪಣೆಗೊಳ್ಳಲಿದೆ.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಮುರಳಿ ಭಟ್ ಬಂಗಾರಡ್ಕ, ಕಾರ್ಯಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಗೌಡ ಅಂಬಂಟ ಆಯ್ಕೆಯಾಗಿದ್ದಾರೆ.
ಸುಮಾರು 40 ಲಕ್ಷಕ್ಕಿಂತಲೂ ಮಿಕ್ಕಿದ ವೆಚ್ಚದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಕಡಿಮೆ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕೆಂಬ ಸಂಕಲ್ಪ ಭಕ್ತರದ್ದಾಗಿದ್ದು, ಅಹೋರಾತ್ರಿ ಕೆಲಸ ಮಾಡಿ ಮೇಲ್ಛಾವಣಿ ಮತ್ತು ಇಂಟರ್ ಲಾಕ್ ಅಳವಡಿಕೆ, ಸುತ್ತ ಆವರಣ ಗೋಡೆ ಸೇರಿದಂತೆ, ಮುಂದಿನ ದಿವಸದಲ್ಲಿ ಮದುವೆ ಸೇರಿದಂತೆ ಸುಮಾರು 2000 ಜನರಿಗೆ ಜರಗುವಷ್ಟು ಸ್ಥಳವಕಾಶವನ್ನು ಕಲ್ಪಿಸಿಕೊಡಲಾಗಿದೆ.
ನಾಗ ಸಂಬಂಧಿ ಕಾರ್ಯಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿಗೆ ಹೆಸರುವಾಸಿಯಾಗಿರುವ ಮತ್ತು ವಿಶೇಷ ಪ್ರಾಧಾನ್ಯತೆಯನ್ನು ಹೊಂದಿದ ದೇವಸ್ಥಾನ ಇದಾಗಿದ್ದು, ದಿನನಿತ್ಯ ಈ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರುತ್ತಿದ್ದು, ಈ ಕೆಲಸ ಕಾರ್ಯದಿಂದಾಗಿ ಭಕ್ತರಿಗೆ ಇನ್ನಷ್ಟು ಅನುಕೂಲತೆ ಸಿಗಲಿದೆ.