ಬೆಂಗಳೂರು: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಶಾಸಕರ, ಸಚಿವರ ಸಂಬಳವನ್ನು ಭರ್ಜರಿಯಾಗಿ ಹೆಚ್ಚಳ ಮಾಡಲಾಗಿದೆ. ಕಳೆದ ಐದು ದಿನಗಳಿಂದ ಗದ್ದಲದಲ್ಲೇ ಕಳೆಯುತ್ತಿರುವ ಸದನದಲ್ಲಿ ಇಂದು (ಫೆಬ್ರವರಿ 22) ಶಾಸಕರ(MLA) ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ(Salary) ಭತ್ಯೆ ಹೆಚ್ಚಳ ಮಾಡಲಾಗಿದೆ. ಇಂದು ಸಚಿವರ (Ministers) ವೇತನ, ಭತ್ಯೆ ಹೆಚ್ಚಳದ ವಿಧೇಯಕ ಅಂಗೀಕಾರ ಮಾಡಲಾಗಿದೆ. ಜತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ.
ಶಾಸಕರ ಸಂಬಳವನ್ನೂ 2015 ರಿಂದ ಹೆಚ್ಚಿಸಿರಲಿಲ್ಲಾ, ಹೀಗಾಗಿ ಈ ಬಾರಿ ಶಾಸಕರ ಸಂಬಳ ಹೆಚ್ಚಿಸಲು ವಿಧೇಯಕ ರೂಪಿಸಲಾಗಿದೆ ಎಂದಿದ್ದಾರೆ. ಇನ್ನು ಮುಂದೆ ಪ್ರತಿ ಐದು ವರ್ಷಕ್ಕೊಮ್ಮೆ ಸ್ವಾಭಾವಿಕವಾಗಿ ಸಂಬಳ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಿಧೇಯಕಗಳಲ್ಲಿ ಶಾಸಕರ ಸಂಬಳ, ಮಂತ್ರಿಗಳ ಸಂಬಳ, ಆತಿಥ್ಯ ಭತ್ಯೆ, ಮಂತ್ರಿಗಳ ಮನೆ ಬಾಡಿಗೆ, ಮನೆ ನಿರ್ವಹಣೆ ವೆಚ್ಚ, ವಾಹನ ಸೌಲಭ್ಯಕ್ಕೆ ಹಾಗೂ ಪ್ರಯಾಣಕ್ಕೆ ಇದ್ದ ಎಲ್ಲಾ ವೆಚ್ಚಗಳನ್ನು ಈ ವಿಧೇಯಕದ ಮೂಲಕ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂಗೀಕಾರವಾಗಿರುವ ಶಾಸಕರು, ಸಭಾಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಮುಖ್ಯ ಸಚೇತಕರ ಸಂಬಳ ಹಾಗೂ ಭತ್ಯೆ ಹೆಚ್ಚಳದ ಸಂಪೂರ್ಣ ವಿವರಗಳನ್ನು ಈ ರೀತಿಯಲ್ಲಿ ನೋಡಬಹುದು..
ಸಭಾಧ್ಯಕ್ಷರು/ ಉಪಸಭಾಧ್ಯಕ್ಷರು :
- ಸಂಬಳ : ₹50,000 ದಿಂದ ₹ 75,000 ಕ್ಕೆ ಹೆಚ್ಚಳ
- ಆತಿಥ್ಯ ವೇತನ ವಾರ್ಷಿಕ : ₹3,00,000 ದಿಂದ ₹ 4,00,000 ಕ್ಕೆ ಹೆಚ್ಚಳ
- ಮನೆ ಬಾಡಿಗೆ : ₹80,000 ದಿಂದ ₹1,60,000 ಕ್ಕೆ ಹೆಚ್ಚಳ
- ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ
- ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ ಗೆ ₹30 ರಿಂದ ₹40 ಕ್ಕೆ ಹೆಚ್ಚಳ
- ದಿನ ಭತ್ಯೆ (ಪ್ರಯಾಣ) : ದಿನಕ್ಕೆ ₹2000 ದಿಂದ ₹3000
- ಹೊರ ರಾಜ್ಯ ಪ್ರವಾಸ : ದಿನಕ್ಕೆ ₹2500 + ₹5000 ದಿಂದ ₹3000 + ₹7000 ಕ್ಕೆ ಹೆಚ್ಚಳ ಮಾಡಲಾಗಿದೆ.
ವಿಪಕ್ಷ ನಾಯಕರ ಸಂಬಳ :
- ಸಂಬಳ : ₹40,000 ದಿಂದ ₹ 60,000 ಕ್ಕೆ ಹೆಚ್ಚಳ
- ಆತಿಥ್ಯ ವೇತನ ವಾರ್ಷಿಕ : ₹2,00,000 ದಿಂದ ₹ 2,50,000 ಕ್ಕೆ ಹೆಚ್ಚಳ
- ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ
- ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ ₹30 ಕ್ಕೆ ಹೆಚ್ಚಳ
- ದಿನ ಭತ್ಯೆ (ಪ್ರಯಾಣ): ದಿನಕ್ಕೆ ₹2000 ದಿಂದ ₹3000 ಕ್ಕೆ ಹೆಚ್ಚಳ
- ಹೊರ ರಾಜ್ಯ ಪ್ರವಾಸ : ₹5000 ದಿಂದ ₹7000 ಕ್ಕೆ ಹೆಚ್ಚಳ ಮಾಡಲಾಗಿದೆ.
ಶಾಸಕರ ಸಂಬಳ:
- ಸಂಬಳ: ₹20,000 ದಿಂದ ₹ 40,000 ಕ್ಕೆ ಹೆಚ್ಚಳ
- ಕ್ಷೇತ್ರದ ಭತ್ಯೆ : ₹40,000 ದಿಂದ ₹60,000 ಕ್ಕೆ ಹೆಚ್ಚಳ
- ಆತಿಥ್ಯ ವೇತನ (ವಾರ್ಷಿಕ) : ₹2,00,000 ದಿಂದ ₹ 2,50,000 ಕ್ಕೆ ಹೆಚ್ಚಳ
- ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ
- ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ ₹25 ರಿಂದ ₹30 ಕ್ಕೆ ಹೆಚ್ಚಳ
- ದಿನ ಭತ್ಯೆ (ಪ್ರಯಾಣ): ದಿನಕ್ಕೆ ₹2000 ದಿಂದ ₹2500 ಕ್ಕೆ ಹೆಚ್ಚಳ
- ಹೊರ ರಾಜ್ಯ ಪ್ರವಾಸ : ₹5000 ದಿಂದ ₹7000 ಕ್ಕೆ ಹೆಚ್ಚಳ ಮಾಡಲಾಗಿದೆ.
ಉಳಿದಂತೆ ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ ₹20,000 ಕ್ಕೆ ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ ₹10,000 ರಿಂದ ₹20,000 ಕ್ಕೆ ಹೆಚ್ಚಳ ಮಾಡಲಾಗಿದೆ.