ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ರವರ ಕೊಲೆ ಪ್ರಕರಣದ ವಿರುದ್ಧ ಹಿಂದೂ ಜಾಗರಣ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕತ್ತಲಲ್ಲಿ ಗುಂಪು ಕಟ್ಟಿಕೊಂಡು ಬಂದು ಹಿಂದಿನಿಂದ ಇರಿಯುವ ಕುತಂತ್ರ, ಹೇಡಿತನವಾಗಿದೆ. ಹರ್ಷನ ಕೊಲೆ ಪ್ರಕರಣ ಎನ್.ಐ.ಎ. ತನಿಖೆಯಾಗಲಿ ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ವೋಟಿನ ರಾಜಕೀಯದ ಸೆಕ್ಯುಲರ್ ವಾದಿಗಳ, ಬೆಂಬಲದಿಂದ ತಾಲಿಬಾನ್-ಐಸಿಸ್ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಈ ಪಾಶವೀ ಕೃತ್ಯ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಅತ್ಯುಗ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಷರಿಯಾ ಕಾನೂನಿನಂತೆ ಶಿಕ್ಷೆಗೆ ಒಳಪಡಿಸುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.
ಸೈದ್ಧಾಂತಿಕ ನೆಲೆಯಲ್ಲಿ ಹೋರಾಡುವುದಕ್ಕೆ ಬದಲಾಗಿ, ತಮ್ಮ ವಿಚಾರ ಒಪ್ಪದವರನ್ನು ಹತ್ಯೆ ಮಾಡುವ ಮೂಲಕ ಹಿಂದುತ್ವವನ್ನು ನಾಶ ಮಾಡಬಹುದೆಂಬ ಭ್ರಮೆ ಗೊಳಗಾದ ಶಕ್ತಿಗಳ ಕ್ರೂರ ಮಾನಸಿಕತೆಗೆ ಈ ಕೊಲೆ ಮತ್ತೊಂದು ಸಾಕ್ಷಿ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಕ್ರೋಶ ವಕ್ತಪಡಿಸಿದೆ.
ಈ ಕೊಲೆಯಲ್ಲಿ ಫ್ರಂಟ್ ಆಫ್ ಇಸ್ಲಾಂ, ಕರ್ನಾಟಕ ಫಾರ್ ಡಿಸ್ಟ್ರಕ್ಷನ್ ಮತ್ತು ಡೆಮಾಕ್ರಟಿಕ್ ಪಾರ್ಟಿ ಆಫ್ ಇಸ್ಲಾಂ ಇದೆ ಎಂಬ ಬಲವಾದ ಸಂದೇಹ ಇದೆ, ಹರ್ಷ ಕೊಲೆ ಪ್ರಕರಣ ಮತ್ತು ಹಿಜಾಬ್ ಪ್ರಕರಣದ ಬಗ್ಗೆ ಎನ್.ಐ.ಎ. ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂಜಾವೇ ಆಗ್ರಹಿಸಿದ್ದು, ಹಿಂದೂ ಹರ್ಷನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಿಂಜಾವೇ ಆಗ್ರಹವಾಗಿದೆ.
ರಾಜ್ಯದಾದ್ಯಂತ ಮತಾಂಧ ಶಕ್ತಿಗಳ ಸಂಚನ್ನು ಬಯಲಿಗೆಳೆಯುವಂತೆ ಸರಕಾರ ಮತ್ತು ಜಿಲ್ಲಾಡಳಿತಗಳನ್ನು ಕರ್ನಾಟಕ ಹಿಂದೂ ಜಾಗರಣ ವೇದಿಕೆಯು ಬಲವಾಗಿ ಆಗ್ರಹಿಸಿದೆ. ಹಿಂದಿನ ಸರ್ಕಾರದ ಸಮಯದಲ್ಲಿ ನಡೆದಂತೆ ಈಗಲೂ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆದರೆ ಈ ಸರ್ಕಾರ ಬಂದು ಏನು ಪ್ರಯೋಜನ..?? ಇನ್ನೊಬ್ಬ ಕಾರ್ಯಕರ್ತನ ಕೂದಲು ಕೊಂಕಬಾರದು ಆ ಭಯ ಹುಟ್ಟಿಸುವ ತಾಕತ್ತು ಸರ್ಕಾರ ತೋರಿಸಬೇಕು. ಹಿಂದೂಗಳ ನಂಬಿಕೆ ಉಳಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ. ಟಿ. ರವರು ಆಗ್ರಹಿಸಿದ್ದಾರೆ.