ಪುತ್ತೂರು: ಬಪ್ಪಳಿಗೆಯ ಗಂಪಗಲ್ಲಿನ ಸಂಜೀವ ಬಿ ಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಬಡ ಕುಟುಂಬದ ಆದಾಯದ ಮೂಲ ಸಂಜೀವ ರವರೆ ಆಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಬಡ ಕುಟುಂಬ ಮತ್ತಷ್ಟು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.
ಕುಟುಂಬದ ಆದಾಯದ ಮೂಲವಾದ ಸಂಜೀವ ರವರು ಅನಾರೋಗ್ಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಮನೆಯಲ್ಲಿ ಇರುವ ಕಾರಣ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದು, ಊಟ ಮತ್ತು ಔಷದದ ವ್ಯವಸ್ಥೆಗೆ ತುಂಬಾ ತೊಂದರೆಯಾಗಿದ್ದು, ಸಹಾಯಕ್ಕಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಿತಿಯ ಅಧ್ಯಕ್ಷರಾದ ಕೇಶವ ಪಡೀಲ್ ರವರನ್ನು ಸಂಪರ್ಕಿಸಿದರು.
ಈ ಸಂದರ್ಭದಲ್ಲಿ ಸಹಾಯ ಮಾಡುವ ಭರವಸೆಯನ್ನು ನೀಡಿದ ಕೇಶವ ಪಡೀಲ್ ರವರು ನಮ್ಮೂರ ಸೇವೆ 24*7 ನ ಹಕೀಂ ಕೂರ್ನಡ್ಕರವರನ್ನು ಸಂಪರ್ಕಿಸಿದಾಗ ಹಕೀಂ ಕೂರ್ನಡ್ಕರವರು ಕೂಡಲೇ ಸ್ಪಂದಿಸಿ ಒಂದು ತಿಂಗಳಿಗೆ ಬೇಕಾದ ಎಲ್ಲಾ ಆಹಾರ ಸಾಮಾಗ್ರಿಗಳನ್ನು ಒದಗಿಸಿ ಕೊಡುವ ಜೊತೆಗೆ ಮುಂದಿನ ಚಿಕಿತ್ಸೆಗೂ ಸಹಾಯ ಮಾಡುವ ಭರವಸೆಯನ್ನು ನೀಡಿದರು.