ತಿರುಮಲ ತಿರುಪತಿ ದೇವಸ್ಥಾನವು ಭಕ್ತಾದಿಗಳಿಗೆ ಶಾಕ್ ನೀಡಿದ್ದು, ದೇವಸ್ಥಾನದ ಜಿಲೇಬಿ ಪ್ರಸಾದದ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ.
ಹೌದು ಜಿಲೇಬಿ ಪ್ರಸಾದ ಬೆಲೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಹೆಚ್ಚಿಸಿದೆ. 100 ರೂಪಾಯಿ ಇದ್ದ ಜಿಲೇಬಿಯ ಬೆಲೆಯನ್ನು ಬರೋಬ್ಬರಿ 500 ರೂಪಾಯಿಗೆ ಏರಿಸಲಾಗಿದೆ. ದೇವಸ್ಥಾನದಲ್ಲಿ ಮುಂದೆ ಬರಲಿರುವ ಆರ್ಜಿತ ಸೇವೆಯ ದಿನದಂದು ಈ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ. ಜಿಲೇಬಿಯನ್ನು ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸಲು, ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್ಗೆ ಬದಲಾಯಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಟಿಟಿಡಿ ಟ್ರಸ್ಟ್‌ನ ಮಾಜಿ ಸದಸ್ಯ ಜಿ ಭಾನುಪ್ರಕಾಶ್ ರೆಡ್ಡಿ ಕೂಡ ಬೆಲೆ ಏರಿಕೆ ತಪ್ಪು ಎಂದಿದ್ದಾರೆ. ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು. ಆದರೆ ಇಲ್ಲಿ ಟಿಟಿಡಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣಕ್ಕೆ ಭಕ್ತರನ್ನು ಸುಲಿಗೆ ಮಾಡುತ್ತಿದೆ, ಇದು ಆಕ್ಷೇಪಾರ್ಹವಾಗಿದೆ ಎಂದು ಆರೋಪಿಸಿದ್ದಾರೆ. ಇದರ ನಡುವೆಯೂ ಪ್ರಸಾದದಲ್ಲಿ ನಡೆಯುತ್ತಿದ್ದ ಕಾಳ ದಂಧೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.