ಬೆಂಗಳೂರು: ಹರ್ಷ ಹತ್ಯೆಯ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಹಿಂದೂ ಕಾರ್ಯಕರ್ತನ ಕೊಲೆ ಬಗ್ಗೆ ಬಿಜೆಪಿ ನಾಯಕರು ಈಗಾಗಲೇ ಟೆನ್ಷನ್ನಲ್ಲಿದ್ದಾರೆ. ಇದೀಗ ಹೈಕಮಾಂಡ್ ಹರ್ಷನ ಹತ್ಯೆ ವಿಚಾರವಾಗಿ ಸಂಪೂರ್ಣ ವರದಿ ಕೇಳಿದೆ. ಇದಕ್ಕಾಗಿ ಫೀಲ್ಡಿಗಿಳಿದಿರೋ ಗೃಹ ಸಚಿವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕೈಗೆ ವರದಿ ನೀಡಲಿದ್ದಾರೆ.
ಹಿಂದುತ್ವವನ್ನೇ ಆರಾಧಿಸ್ತಿದ್ದ ಹರ್ಷನ ಕೊಲೆಗೆ ನಿಜವಾದ ಕಾರಣವೇನು..? ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸ್ತಿದ್ದ ಹರ್ಷ ಇದ್ದಕ್ಕಿದ್ದಂತೆ ಕೊಲೆಯಾಗೋದಿಕ್ಕೆ ರೀಸನ್ ಏನು..? ಹೀಗೆ ಹಲವಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಜೊತೆಗೆ ಕೊಲೆ ಪ್ರಕರಣದ 7 ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಪ್ರಕರಣದ ಇಂಚಿಂಚೂ ಮಾಹಿತಿಯನ್ನ ಹಿಡಿದು ತನಿಖೆ ನಡೆಸ್ತಿದ್ದಾರೆ. ಆದ್ರೆ, ರಾಜ್ಯ ಬಿಜೆಪಿ ನಾಯಕರಿಗೆ ಈ ಪ್ರಕರಣದಿಂದ ಮತ್ತೊಂದು ತಲೆನೋವು ಶುರುವಾಗಿದೆ. ಜೊತೆಗೆ ಹರ್ಷ ಹತ್ಯೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ ಎಂಬ ಭೀತಿ ಬಿಜೆಪಿ ಪಾಳಯಕ್ಕೆ ಕಾಡುತ್ತಿದೆ.
ಹರ್ಷ ಹತ್ಯೆ ರಿಪೋರ್ಟ್ ಕೇಳಿದ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ. ಇದು ಕೇಸರಿ ಪಾಳಯಕ್ಕೆ ಅರಗಿಸಿಕೊಳ್ಳದಾಗಿದೆ. ಈ ಮಧ್ಯೆ ಹರ್ಷ ಹತ್ಯೆಯ ರಿಪೋರ್ಟ್ ನೀಡುವಂತೆ ರಾಜ್ಯ ಬಿಜೆಪಿಗೆ ಹೈಕಮಾಂಡ್ ತಾಕೀತು ಮಾಡಿದೆ. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹತ್ಯೆಗಳಾಗ್ತಿದ್ದವು. ಆದ್ರೀಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಹೀಗಿದ್ದರೂ ಹಿಂದೂ ಕಾರ್ಯಕರ್ತರ ಹತ್ಯೆಯಾಗೋದ್ಯಾಕೆ? ಹೀಗಾಗಿ ಈ ಪ್ರಕರಣದ ಸಂಪೂರ್ಣ ವರದಿಯನ್ನ ನೀಡಿ ಅಂತಾ ರಾಜ್ಯ ಬಿಜೆಪಿಗೆ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
‘ಹತ್ಯೆಯ ರಿಪೋರ್ಟ್ ಕೊಡಿ’:
ಶಿವಮೊಗ್ಗ ಹರ್ಷ ಹತ್ಯೆಯ ವರದಿ ಕೇಳಿದ ಬಿಜೆಪಿ ಹೈಕಮಾಂಡ್ ನಮ್ಮದೇ ಸರ್ಕಾರ ಇರುವಾಗ ಕಾರ್ಯಕರ್ತರ ಹತ್ಯೆ ಹೇಗೆ ಆಯ್ತು..? ಈ ಪ್ರಕರಣವನ್ನು ಸೂಕ್ತವಾಗಿ ಎದುರಿಸಬೇಕೆಂದು ಬಿಜೆಪಿ ಕೊಲೆ ಸಂಚು ಸೇರಿದಂತೆ ಎಲ್ಲಾ ಶಿವಮೊಗ್ಗದಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆಯೂ ಮಾಹಿತಿ ಕೇಳಿದ ವರಿಷ್ಠರು ವರದಿ ರೂಪದಲ್ಲಿ ಮಾಹಿತಿ ಕೊಡುವಂತೆ ನಳಿನ್ ಕುಮಾರ್ಗೆ ಸೂಚನೆ ನೀಡಿದ್ದಾರೆ. ಶಿವಮೊಗ್ಗಕ್ಕೆ ತೆರಳಿ ಎಲ್ಲಾ ಮಾಹಿತಿ ಕಲೆ ಹಾಕಲಿರುವ ಗೃಹ ಸಚಿವರು, ನಳಿನ್ ಕುಮಾರ್ ಕೈಗೆ ವರದಿ ನೀಡಲಿದ್ದಾರೆ.