ವಿಟ್ಲ: ಚಿಕನ್ ಸ್ಟಾಲ್ ನ ಗೂಡನ್ನು ಮುರಿದು ಸುಮಾರು 75 ಕೆಜಿಯಷ್ಟು ಕೋಳಿಯನ್ನು ಕದ್ದೊಯ್ದ ಘಟನೆ ಅನಂತಾಡಿ ಸಮೀಪದ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.
ಚಿಕನ್ ಸ್ಟಾಲ್ ಮಾಲಕರು ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕಳ್ಳತನ ನಡೆಸಿದ ಕೋಳಿಗಳನ್ನು ಯಾವುದಾದರೂ ಅಂಗಡಿಗೆ ಮಾರಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು,ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.