ಸುಳ್ಯ: ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಐವರ್ನಾಡಿನಲ್ಲಿ ನಡೆದಿದೆ.
ಮೃತರನ್ನು ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಎನ್ನಲಾಗಿದೆ.
ದಯಾನಂದ ಅವರು ಮಡ್ತಿಲ ಎಂಬಲ್ಲಿ ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಮೆಶಿನ್ ನಲ್ಲಿ ಹಲಗೆ ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಮೆಶಿನ್ ಆಕಸ್ಮಿಕವಾಗಿ ಕೈಯಿಂದ ತಪ್ಪಿ ತೊಡೆಯ ಬಾಗಕ್ಕೆ ತಾಗಿದೆ.
ಗಂಭೀರ ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ತಾಯಿ, ಪತ್ನಿ, ಪುತ್ರ , ಪುತ್ರಿಯನ್ನು ಅಗಲಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.