ಪುತ್ತೂರು: ಎನ್.ಎಸ್.ಯು.ಐ ಪುತ್ತೂರು ತಾಲೂಕು ಸಮಿತಿ ವತಿಯಿಂದ ಉಕ್ರೇನ್‌ನಲ್ಲಿ ರಷ್ಯಾದ ಭೀಕರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕ ಮೂಲದ ನವೀನ್ ಶೇಖರಪ್ಪ ನವರಿಗೆ ಪುತ್ತೂರು ಗಾಂಧಿ ಕಟ್ಟೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ನಾಯಕ ಭಾತೀಷ್ ಅಳಕೆಮಜಲು, ಮಾದ್ಯಮಗಳಲ್ಲಿ ಸರ್ಕಾರವನ್ನು ವಿದ್ಯಾರ್ಥಿಗಳ ರಕ್ಷಕ ಎಂಬ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ. ಆದರೇ ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಒಂದು ಹೊತ್ತಿನ ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.
ಮಾಧ್ಯಮವು ಸರ್ಕಾರವನ್ನು ಹೀರೋ ಮಾಡಿ ನಕಲಿ ಮಾಹಿತಿಗಳನ್ನು ನೀಡುತ್ತಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದೆ ಕೂಗುತ್ತಿದ್ದಾರೆ. ಸರ್ಕಾರವು ಆದಷ್ಟು ಬೇಗ ಉಳಿದ ವಿದ್ಯಾರ್ಥಿಗಳನ್ನು ಭಾರತಕ್ಕೆ ತರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಿದೆ. ಹಾಗೂ ಸರ್ಕಾರವು ಮೃತಪಟ್ಟ ನವೀನ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನ ಒದಗಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಎನ್.ಎಸ್.ಯು.ಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ತಮೀಝ್ ಕೋಲ್ಪೆ ಹಾಗೂ ಪುತ್ತೂರು ಎನ್.ಎಸ್.ಯು.ಐ ನಾಯಕರಾದ ಭವಿಷ್ ರೈ , ಉನೈಸ್ ಗಡಿಯಾರ್, ಶಶಾಂಕ್, ಫಯಾಜ್ ಪೊಳ್ಯ, ಚಂದನ್ ನಾಯ್ಕ್, ರಿಫಾನ್, ರಾಫಿಹ್, ಅನಸ್,ರುಸೈದ್ ಪೋಲ್ಯ, ಯಸ್ಟನ್ ಬೊಳ್ವಾರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.