ಲಿಪ್ಸ್ ಸ್ಟಿಕ್ ಹಚ್ಚುವುದು ಎಲ್ಲಾ ಹೆಣ್ಣುಮಕ್ಕಳಿಗೂ ತುಂಬಾ ಇಷ್ವ, ಆದರೆ ಲಿಪ್ಸ್ ಸ್ಟಿಕ್ ಹಚ್ಚುವುದರಿಂದ ಕೆಲವೊಮ್ಮೆ ಅಲರ್ಜಿಗೆ ಕಾರಣವಾಗುತ್ತದೆ. ಹಾಗಿದ್ದರೆ ನಿಮ್ಮ ತುಟಿಗಳನ್ನು ಯಾವ ರೀತಿ ಆರೈಕೆ ಮಾಡಬೇಕು ಗೊತ್ತಾ? ಇಲ್ಲಿದೆ ಕೆಲವು ಟಿಪ್ಸ್
ತುಟಿಯನ್ನು ಮುಟ್ಟತ್ತಿರಬೇಡಿ: ಆಗಾಗ ತುಟಿ ಮುಟ್ಟಿಕೊಳ್ಳುವುದರಿಂದ ಹೆಚ್ಚು ಅಲರ್ಜಿ ಆಗುವ ಸಾಧ್ಯತೆ ಇದೆ. ತುಟಿಯನ್ನು ಎಂಜಿಲು ಮಾಡಿಕೊಳ್ಳುವುದರಿಂದಲೂ ತುಟಿ ಡ್ರೈ ಆಗಲಿದೆ. ನೀರು ಕುಡಿಯಿರಿ: ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೇಟ್ ಆಗುತ್ತದೆ. ಇದು ತುಟಿಯನ್ನು ಒಡೆಯದಂತೆ ಕಾಪಾಡುತ್ತದೆ.
ಮೇಕಪ್ ತೆಗೆಯಿರಿ: ರಾತ್ರಿ ಮಲಗುವಾಗ ತುಟಿಗೆ ಹಚ್ಚಿರುವ ಮೇಕ್ ಅಪ್, ಲಿಪ್ಸ್ ಸ್ಟಿಕ್ ಅನ್ನು ತೆಗೆಯಿರಿ. ಇದು ನಿಮ್ಮ ತುಟಿಯನ್ನು ಕಾಳಜಿ ಮಾಡುತ್ತದೆ. ಮಸಾಜ್ ಮಾಡಿ: ನಿಮ್ಮ ತುಟಿಗೆ ಸ್ವಲ್ಪ ತುಪ್ಪ ಹಚ್ಚಿ ಕನಿಷ್ಟ 5 ನಿಮಿಷವಾದರೂ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ತುಟಿಯಲ್ಲಿ ರಕ್ತ ಸಂಚಲನ ಸುಗಮವಾಗುತ್ತದೆ.