ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ಕೇವಲ ಧಾರ್ಮಿಕ, ಸಾಮಾಜಿಕವಾಗಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ.ಅದೇ ರೀತಿ ಮುಳಿಯ ಜ್ಯುವೆಲ್ಲರ್ಸ್ ಕಳೆದ ವರ್ಷ ಇಟ್ಟಿರುವ ವಿನೂತನ ಹೆಜ್ಜೆ “ಮುಳಿಯ ಗಾನರಥ”.. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಗಾಯಕರಿಗೆ ಆಯೋಜಿಸುವ ಸ್ಪರ್ಧೆ ಇದಾಗಿದ್ದು, ಗ್ರಾಮ ಮಟ್ಟದ ಪ್ರದೇಶದಲ್ಲಿ ತಮ್ಮದೇ ಗಾನರಥದಲ್ಲಿ ವೇದಿಕೆ ಸಜ್ಜುಗೊಳಿಸಿ ಗಾಯಕರಿಗೊಂದು ಸೂರು ಕಲ್ಪಿಸುತ್ತದೆ.
ಗಾನರಥ ಗಾನಕೋಗಿಲೆ ಕಾರ್ಯಕ್ರಮ ಈಗಾಗಲೆ ಬೆಳ್ತಂಗಡಿ, ಪುತ್ತೂರಿನಲ್ಲಿ ಸುಸೂತ್ರವಾಗಿ ಪೂರ್ಣಗೊಂಡಿದ್ದು, ಇದೀಗ ತೃತೀಯ ಹಂತದ ಗಾಯನ ಸ್ಪರ್ಧೆಯ ಅಡಿಷನ್ ಗಾಗಿ ದಿನಾಂಕವೂ ನಿಗದಿಯಾಗಿದೆ.ಮಾ.20 ರಂದು ಗಾನಕೋಗಿಲೆ – ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ತೃತೀಯ ಹಂತದ ಅಡಿಷನ್ ಉಪ್ಪಿನಂಗಡಿ ಬಸ್ ನಿಲ್ದಾಣದ ಹತ್ತಿರ ಸಂಜೆ 4.30 ರಿಂದ ಆರಂಭಗೊಳ್ಳಲಿದೆ. 12 ರಿಂದ 21 ವರ್ಷ ಹಾಗೂ 21 ವರ್ಷ ಮೇಲ್ಪಟ್ಟು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ – ಹಿಂದಿ – ತುಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡಲು ಅವಕಾಶವಿದೆ.
ಸ್ಪರ್ಧಾ ನಿಬಂಧನೆಗಳು ಹೇಗಿದೆ?
1.ವಯೋಮಿತಿ ಆಧಾರಕ್ಕಾಗಿ ಸ್ಪರ್ಧಾಳುಗಳೂ ಆಧಾರ್ ಪ್ರತಿ ನೀಡತಕ್ಕದ್ದು.
2.ಪ್ರೇಕ್ಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಆನ್ಲೈನ್ ಅವಕಾಶ
3.ಕರೋಕೆ ಗಾಯನ ಶುದ್ಧವಾಗಿರಬೇಕು
4.ಕರೋಕೆ ಇರುವ ಕೃತಿಯಲ್ಲೇ ಗಾಯನವಿರಬೇಕು
5.ಆಡಿಶನ್ ನಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳಿದ್ದಲ್ಲಿ ಪಲ್ಲವಿ ಮತ್ತು ಚರಣ ಹಾಡಲು ಅವಕಾಶವಿದೆ. ಆದರೂ ಪೂರ್ಣ ಹಾಡಿನ ಕಲಿಕೆಯಿರಲಿ.
6.ಆಡಿಷನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
7.ಗ್ರಾಂಡ್ ಫಿನಾಲೆಯಲ್ಲಿ ಪುತ್ತೂರು ಗಾನಕೋಗಿಲೆ ಬಿರುದು ನೀಡಿ ಗೌರವಿಸಲಾಗುವುದು.
8.ಕೋವಿಡ್ ನಿಯಮಗಳನ್ನು ಅನುಸರಿಸಬೇಕು.
ಈ ಬಾರಿ ಪುತ್ತೂರು ತಾಲೂಕಿನ 10 ಗ್ರಾಮೀಣ ಪ್ರದೇಶದಲ್ಲಿ ಆಡಿಷನ್ ನಡೆಯಲಿದ್ದು, ನಿಮ್ಮೂರಿಗೆ ಮುಳಿಯ ಗಾನರಥ ಹೆಜ್ಜೆ ಇಡಲಿದೆ.. ನೀವಿದ್ದಲಿಗೆ ಬಂದು ನಿಮ್ಮ ಪ್ರತಿಭೆಗೆ ವೇದಿಕೆ ನೀಡಲಿದೆ. ಸ್ಪರ್ಧೆಯಲ್ಲಿ ಗಾಯನ ಪ್ರತಿಭೆಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದ್ದು, ಸುಂದರ ಸಂಜೆಯ ವೇದಿಕೆಯಲ್ಲಿ ಮಿಸ್ ಮಾಡದೇ ಪಾಲ್ಗೊಳ್ಳಿ.. ಆಡಿಷನ್ ಲ್ಲಿ ಪಾಲ್ಗೊಳ್ಳಲು ನೋಂದಾವಣಿಗಾಗಿ ಸಂಪರ್ಕಿಸಿ – 9743175916