ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಅನುಭವಿ ಆಟಗಾರನಿಗೆ ಮಣೆ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಫಾಪ್ ಡುಪ್ಲೆಸಿಸ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದೆ.
ಚರ್ಚ್ ಸ್ಟ್ರೀಟ್ನಲ್ಲಿಂದು ಅಭಿಮಾನಿಗಳಿಗಾಗಿ ಅನ್ಬಾಕ್ಸ್ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದ ಆರ್ಸಿವಿ, ನೂತನ ಕ್ಯಾಪ್ಟನ್ ಹೆಸರನ್ನು ರಿವೀಲ್ ಮಾಡಿದೆ.
2021ರ ಐಪಿಎಲ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮ್ಯಾಕ್ಸ್ವೆಲ್ ಸೇರಿದಂತೆ ಹಲವು ಸ್ಟಾರ್ ಆಟಗಾರರ ಹೆಸರು ಕ್ಯಾಪ್ಟನ್ ರೇಸ್ನಲ್ಲಿ ಕಂಡು ಬಂದಿತ್ತು. ಸದ್ಯ ಆರ್ಸಿಬಿ ಫ್ರಾಂಚೈಸಿ, ಅನುಭವಿ ಆಟಗಾರ ಡುಪ್ಲೆಸಿಸ್ಗೆ ಮಣೆ ಹಾಕಿದೆ.
The Leader of the Pride is here!
— Royal Challengers Bangalore (@RCBTweets) March 12, 2022
Captain of RCB, @faf1307! 🔥#PlayBold #RCBCaptain #RCBUnbox #ForOur12thMan #UnboxTheBold pic.twitter.com/UfmrHBrZcb