ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ ‘ಪುಷ್ಪ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವದಾದ್ಯಂತ 300 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ದೇಶಾದ್ಯಂತ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ ಶ್ರೀವಲ್ಲಿ ಹಾಡಂತೂ ಸದ್ಯ ಟಾಪ್ ಟ್ರೆಂಡಿಂಗ್ ಹಾಡುಗಳ ಲಿಸ್ಟ್ ನಲ್ಲಿದೆ.
ಈ ಹಾಡಿನಲ್ಲಿರುವ ಸ್ಟೆಪ್ ಯುವ ಜನತೆಯನ್ನು ಆಕರ್ಷಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡಿನದ್ದೆ ಹವಾ. ಆದರೆ ಇದೀಗ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶ್ರೀವಲ್ಲಿ ಹಾಡಿನ ಸ್ಟೆಪ್ ಕಾಣ ಸಿಕ್ಕಿದೆ.
ಸಿನಿಮಾದ ಹಾಡಿನ ದಾಟಿಯಲ್ಲಿ ಮಾಡಿದ ಭಜನೆ ಮತ್ತು ಸ್ಟೆಪ್ ಗಳಿಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದ್ದು, ಇದರಿಂದ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಆಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಭಜನಾ ತಂಡದ ಸದಸ್ಯರು ಭಜನೆ ಹಾಡುತ್ತಲೇ ಈ ಹಾಡಿಗೆ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮಾಡಿರುವ ನೃತ್ಯದಂತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಕಾರ್ಯಕ್ರಮ ಎಲ್ಲಿ ನಡೆದಿರೋದು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಈ ಬಗ್ಗೆ ಸಾಮಾಜಿಕವಾಗಿ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ವೀಡಿಯೋ ಮಾತ್ರ ವ್ಯಾಪಕವಾಗಿ ವೈರಲ್ ಆಗಿದೆ..