ಪುತ್ತೂರು: ವಕೀಲರ ಸಂಘ(ರಿ.) ಇದರ ಆಶ್ರಯದಲ್ಲಿ ವಕೀಲರ ಕ್ರೀಡಾಕೂಟ ಎಪಿಎಲ್-2022 ಸೀಸನ್-5 ಏ.2 ರಂದು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡೆಗಳ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ. ಎಫ್. ಸಿ. ಪ್ರಿಯ ರವಿ ಜೊಗ್ಗೆಕರ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ. ಎಫ್. ಸಿ. ವೆಂಕಟೇಶ್ ಎನ್. ರವರು ಉದ್ಘಾಟಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಕೀಲ ಸಂಘದ ಅಧ್ಯಕ್ಷರಾದ ಮನೋಹರ್ ಕೆ. ವಿ., ಹಾಗೂ ಮುಖ್ಯ ಅತಿಥಿಗಳಾಗಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಮೊಂತೆರೊ, ಖ್ಯಾತ ವಕೀಲರು ಮತ್ತು ಬಂಟ್ವಾಳ ವಕೀಲ ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ಕುಮಾರ್ ವೈ ರವರು ಆಗಮಿಸಲಿದ್ದಾರೆ.