ಮಂಗಳೂರು: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನಿಂದ 18 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಕೊಂಡ ಘಟನೆ ಮಾ.30ರಂದು ನಡೆದಿದೆ.
ಮಾ.30ರಂದು ದುಬೈನಿಂದ ಸ್ಪೈಸ್ ಜೆಟ್ ಮೂಲಕ ಬಂದಿಳಿದ ಮಂಗಳೂರು ಮೂಲದ ಪ್ರಯಾಣಿಕ ತನ್ನ ಬ್ಯಾಗ್‌ನಲ್ಲಿ 25 ಸಾವಿರ ಯುಎಸ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ. ಇದರ ರೂಪಾಯಿ ಮೌಲ್ಯ 18 ಲಕ್ಷದ 80 ಸಾವಿರ ಆಗಿದ್ದು, ಕೇಸು ದಾಖಲಿಸಲಾಗಿದೆ.