ಕಾಸರಗೋಡು: ಕೆಲ ಸಮಯಗಳ ಹಿಂದೆ ನಿಧನರಾದ ಕಾಸರಗೋಡಿನ ಆರ್. ಎಸ್. ಎಸ್. ಕಾರ್ಯಕರ್ತ ಜ್ಯೋತಿಷ್ ಜೆ. ಪಿ ನಗರ ರವರ ಮನೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಹರ್ಷ ರವರ ತಾಯಿ ಹಾಗೂ ಸಹೋದರಿ ಭೇಟಿ ನೀಡಿದರು.
ಈ ವೇಳೆ ಜ್ಯೋತಿಷ್ ಕುಟುಂಬಕ್ಕೆ 2ಲಕ್ಷ ರೂ. ಚೆಕ್ ಮತ್ತು ಜ್ಯೋತಿಷ್ ರವರ ಎರಡನೇ ಮಗುವಿನ 10ನೇ ತರಗತಿ ವರೆಗಿನ ವಿದ್ಯಾಭ್ಯಾಸದ ಪೂರ್ತಿ ಖರ್ಚನ್ನು ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಮಂಗಳೂರು ವಿಭಾಗ ಸಂಚಾಲಕರಾದ ಶರಣ್ ಪಂಪ್ವೆಲ್, ಪುನೀತ್ ಅತ್ತಾವರ, ಭುಜಂಗ ಕುಲಾಲ್, ಶೈಲೇಶ್ ಅಂಜರೆ, ಅವಿನಾಶ್ ಬಡಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾವೂ ಮಗನನ್ನು ಕಳೆದುಕೊಂಡ ನೋವಲ್ಲಿದ್ದರೂ ಜ್ಯೋತಿಷ್ ರವರ ಕುಟುಂಬಕ್ಕೆ ಸಾಂತ್ವನ ಹೇಳಿ, ಸಹಾಯ ಹಸ್ತ ಚಾಚಿದ್ದು ಹರ್ಷ ಕುಟುಂಬದವರ ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ. ಹರ್ಷ ಕುಟುಂಬದ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.