ಕೊಡಗು : ಪೊನ್ನಂಪೇಟೆ ತಾಲೂಕಿನಲ್ಲಿ ಮೂವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಅರಣ್ಯ ಇಲಾಖೆಯ ಗುಂಡೇಟು ತಿಂದು ಸಾವನ್ನಪ್ಪಿದೆ. ಪೊನ್ನಂಪೇಟೆ ತಾಲೂಕಿನ ಗ್ರಾಮಗಳಿಗೆ ರಾಷ್ಟ್ರೀಯ ಹುಲಿ ಅಭಯಾರಣ್ಯ ನಾಗರಹೊಳೆಯಿಂದ ಬಂದಿದ್ದ ಹುಲಿ ಹತ್ತಾರು ಜಾನುವಾರಗಳ ಜೊತೆಗೆ ಮೂರು ಜನರನ್ನು ಬಲಿ ಪಡೆದಿತ್ತು.
ಹೀಗಾಗಿ ಸ್ಥಳೀಯರು, ರೈತರು ಹುಲಿಯನ್ನು ಸೆರೆ ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಹುಲಿಯ ಹಣೆಯ ಭಾಗಕ್ಕೆ ಗುಂಡಿಕ್ಕಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮನುಷ್ಯರನ್ನು ಕೊಂದಿರುವ ಹುಲಿಯೇ ಇದು ಎಂದು ತಿಳಿಸಿದ್ದಾರೆ.