ಉಪ್ಪಿನಂಗಡಿ: ಹಿಂದೂ ಯುವತಿ ಮತ್ತು ಅನ್ಯಕೋಮಿನ ಯುವಕನ ಜೋಡಿಯನ್ನು ಗುಂಡ್ಯ ಸಮೀಪ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಯುವಕ ಕೆಲವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಬಂಧಿತರಾಗಿದ್ದ ಸಿರಿಬಾಗಿಲು ಅನಿಲ ಮನೆ ನಿವಾಸಿ ಬಾಲಚಂದ್ರ(35), ಸಿರಿಬಾಗಿಲು ದೇರಣೆ ನಿವಾಸಿ ರಂಜಿತ್(31) ರವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಬಂಧಿತರ ಪರವಾಗಿ ಖ್ಯಾತ ವಕೀಲರಾದ ಹರೀಶ್ ಬೂಡು ಪಣೆ ಮತ್ತು ಚಿನ್ಮಯ್ ರೈ ಈಶ್ವರಮಂಗಲ ವಾದಿಸಿದರು.