ಉಳ್ಳಾಲ: ಮನೆ ಅಂಗಳದಲ್ಲಿ ಒಣಗಿಸಿಟ್ಟ ಸಾವಿರಾರು ಬೆಲೆಯ ಅಡಿಕೆಯನ್ನು ಕಳ್ಳರು ಕಳವು ನಡೆಸಿರುವ ಘಟನೆ ಕೊಣಾಜೆ ಗ್ರಾಮದ ನಾಟೆಕಲ್‌ಸೈಟ್ ಎಂಬಲ್ಲಿ ನಡೆದಿದೆ.
ನಾಟೆಕಲ್ ಸೈಟ್ ನಿವಾಸಿ ಮಹಮ್ಮದ್ ಎ.ಎಸ್ ಎಂಬವರ ಮನೆಯಿಂದ 60 ಕೆಜಿ ಅಡಿಕೆಯನ್ನು ಕಳ್ಳರು ಕಳವು ನಡೆಸಿದ್ದಾರೆ.
ಒಣಗಿಸಲು ಇಡಲಾದ ಅಡಿಕೆಯ ಒಟ್ಟು ಮೌಲ್ಯ ರೂ.28,000 ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.