ಬೆಳ್ಳಾರೆ: ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ(65)ಎಂಬವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಅವರ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಸಪ್ಪ ಪೂಜಾರಿ ಯವರ ಸಹೋದರ ಬಾಲಕೃಷ್ಣ ಪೂಜಾರಿ ಮತ್ತು ಅವರ ಮಗ ವೇಣು ಗೋಪಾಲನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಲಕೃಷ್ಣ ಪೂಜಾರಿ ಮತ್ತು ವೇಣು ಗೋಪಾಲ ಎಂಬವರು ಸೇರಿಕೊಂಡು ಸೇಸಪ್ಪ ಪೂಜಾರಿ ಯವರನ್ನು ಕೊಲೆಗೈದು ಯಾರಿಗೂ ತಿಳಿಯದಂತೆ ಗೇರು ಅಭಿವೃದ್ಧಿಗೆ ಸಂಬಂಧಪಟ್ಟ ಗುಡ್ಡ ಜಾಗದಲ್ಲಿ ಹಾಕಿ ಹೋಗಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಶೇಷಪ್ಪ ಪೂಜಾರಿ (76) ರವರು 1980 ರಿಂದ ಪತ್ನಿ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು , ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಂದ ಹಣವನ್ನು ಮದ್ಯ ಸೇವನೆ ಮಾಡುತ್ತಾ ಇದ್ದು , ಸುಮಾರು 01 ವರ್ಷಗಳಿಂದ ಬಲ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಅವರ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಾದ ಪಾಲ್ತಾಡು ಗ್ರಾಮದ ಬೊಳಿಯಾಲ ಎಂಬಲ್ಲಿ ವಿಶ್ರಾಂತಿಯಲ್ಲಿದ್ದರು.
ನಿನ್ನೆ ದಿನ ಸಂಜೆ ಶೇಷಪ್ಪ ಪೂಜಾರಿಯವರ ಮೃತದೇಹವು ಬೊಳಿಯಾಲ ಎಂಬಲ್ಲಿ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಸರಕಾರಿ ಗುಡ್ಡ ಜಮೀನಿನಲ್ಲಿ ಕೆಲವು ತಿಂಗಳ ಹಿಂದೆ ಮೃತಪಟ್ಟು ಕೊಳತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಸೇಸಪ್ಪ ಪೂಜಾರಿ ಯವರ ಮರಣದಲ್ಲಿ ಸಂಶಯ ಇರುವುದಾಗಿ ಪುಷ್ಪಾವತಿ ಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಶೇಷಪ್ಪ ಪೂಜಾರಿಯವರ ಪಾಲಿನ ಜಮೀನನ್ನು ವಶಕ್ಕೆ ಪಡೆಯುವ ಅಥವಾ ವೃದ್ಧ ಶೇಷಪ್ಪ ಪೂಜಾರಿಯವರ ಆರೈಕೆ ಮಾಡಲು ಬೇಸತ್ತು ತಮ್ಮ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣು ಗೋಪಾಲನು ಯಾವುದೋ ರೀತಿಯಲ್ಲಿ ಕೊಲೆ ಮಾಡಿ , ಯಾರಿಗೂ ತಿಳಿಯದಂತೆ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಾಗದಲ್ಲಿ ಹಾಕಿ, ಸೇಸಪ್ಪ ಪೂಜಾರಿ ಯವರು ಬೊಳಿಯಾಲ ಮನೆಯಿಂದ ಕಾಣೆಯಾಗಿರುವುದಾಗಿ ಊರಿನಲ್ಲಿ ಸುದ್ದಿ ಮಾಡಿ ಸಾಕ್ಷಿ ನಾಶ ಮಾಡಿರುವುದಾಗಿದೆ ತನಿಖೆ ವೇಳೆ ತಿಳಿದು ಬಂದಿದೆ.