ಪುತ್ತೂರು: ಸರಳ ವ್ಯಕ್ತಿತ್ವದ ಖ್ಯಾತ ಉದ್ಯಮಿಯೋರ್ವರ ಮನೆಗೆ ಗುಂಪು ಕಟ್ಟಿಕೊಂಡು ಅಕ್ರಮ ಪ್ರವೇಶ ಮಾಡಿ ಹಣ ಬೇಡಿಕೆಯಿಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಹಿಂದಾರ್ ಭಾಸ್ಕರ ಆಚಾರ್ ಎಂಬವರು ಈ ಕುರಿತು ಪೊಲೀಸರಿಗೆ
ದೂರು ನೀಡಿದ್ದಾರೆ.
ಏ.09ರಂದು ಮಧ್ಯಾಹ್ನ ತಾನು ಮನೆಯಲ್ಲಿರುವಾಗ ಪರಿಚಯದ
ಮರೀಲಿನ ವಿಜಯ ಶೇಣವ ಮತ್ತು ಇತರ 6 ಅಪರಿಚಿತ ವ್ಯಕ್ತಿಗಳು ವೆನು ಕಾರು ಮತ್ತು ಇನ್ನೋವಾ ಕಾರಿನಲ್ಲಿ ಮನೆಯ ಅಂಗಳಕ್ಕೆ ಬಂದು ಏಕಾಏಕಿ ಎಲ್ಲರೂ ಮನೆಯೊಳಗೆ ಪ್ರವೇಶಿಸಿರುತ್ತಾರೆ. ಅವರ ಪೈಕಿ ಮರೀಲಿನ ವಿಜಯ ಶೇಣವ ಎಂಬವರು ‘ನೀನು ನನಗೆ ದುಡ್ಡು ಕೊಡಲು ಬಾಕಿ ಇದೆ. ಈಗಲೇ ನನಗೆ ದುಡ್ಡು ಕೊಡಬೇಕು. ಇಲ್ಲದಿದ್ದರೆ ನಿನ್ನನ್ನು ಕಿಡ್ನಾಪ್ ಮಾಡುತ್ತೇವೆ’ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ.
ಇದರಿಂದ ಭಯಗೊಂಡ ನಾನು ಅವರಲ್ಲಿ ‘ನಾನು ನಿಮಗೆ ಯಾವುದೇ ಹಣ ಕೊಡಲು ಬಾಕಿ ಇಲ್ಲ’ ಎಂದು ಹೇಳಿ ಮನೆಯ ಹೊರಗೆ ಕೆಲಸ ಮಾಡಿಕೊಂಡಿದ್ದ ಕೆಲಸಗಾರರನ್ನು ಕರೆಯಲೆಂದು ಮನೆಯಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಆರೋಪಿಗಳು ನಾನು ಮನೆಯಿಂದ ಹೊರಗೆ ಹೋಗದಂತೆ ತಡೆದು, ಇಲ್ಲಿಂದ ಹೋದರೆ ಅಥವಾ ಯಾರಿಗಾದರೂ ಫೋನ್ ಮಾಡಿದರೆ ಈಗಲೇ ಕೊಂದು ಬಿಡುತ್ತೇವೆ’ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.
ಆ ಬಳಿಕವೂ, ಹಣ ನೀಡುವಂತೆ ಅವರು ಒತ್ತಾಯಿಸಿ ನಂತರ ಸುಮಾರು 2.50 ಗಂಟೆಗೆ ಅವರು ಬಂದಿದ್ದ ಕಾರುಗಳಲ್ಲಿ ನನ್ನ ಮನೆಯಿಂದ ಹೊರಗೆ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 18 ವರ್ಷಗಳ ಹಿಂದೆ ವಿಜಯ ಶೇಣವ ಎಂಬವರು
ಮರೀಲಿನಲ್ಲಿ ನಿರ್ಮಿಸಿದ ಮನೆಯ ಕಾಮಗಾರಿಯ ಪೈಕಿ ಫೌಂಡೇಶನ್‌ನಿಂದ ಸ್ಥಾಬ್ ವರೆಗಿನ ಕಾಮಗಾರಿಯನ್ನು ತಾನು ಮಾಡಿದ್ದು.ಆದರೆ ವಿಜಯ ಶೇಣವರಿಗೆ ನಾನು ಯಾವುದೇ ಮೊತ್ತವನ್ನು ನೀಡಲು ಬಾಕಿ ಇರುವುದಿಲ್ಲ. ಮಾತ್ರವಲ್ಲ
ಅವರೊಂದಿಗೆ ತನಗೆ ಯಾವುದೇ ಹಣಕಾಸಿನ ವ್ಯವಹಾರ ಇರುವುದಿಲ್ಲ.ಆದುದರಿಂದ ಅಕ್ರಮ ಕೂಟ ಸೇರಿಕೊಂಡು ತನ್ನ ಜಮೀನು ಮತ್ತು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ತನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ ಸದ್ರಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಭಾಸ್ಕರ್ ಆಚಾರ್ ಅವರು ದೂರಿನಲ್ಲಿ ಕೋರಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 143, 447, 448, 504, 506, 341 RW149 ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.