ಅರಬ್ಬಿ ಸಮುದ್ರದಲ್ಲಿ ಇಂದು ಹೊಸ ಬೆಳವಣಿಗೆಯೊಂದು ಗೋಚರಿಸಿದ್ದು, ಕೇರಳ ಕರಾವಳಿ ಸಮೀಪ ಅಲ್ಪ ಪ್ರಮಾಣದಲ್ಲಿ ವಾಯುಭಾರ ಕುಸಿತಗೊಂಡಿರುವುದು ಸ್ಪಷ್ಟವಾಗಿದೆ. ಇದು ಕರಾವಳಿ ಭಾಗದಲ್ಲಿ ತನ್ನ ಪ್ರಭಾವ ಉಂಟುಮಾಡಲಿದೆ. ಪರಿಣಾಮವಾಗಿ ಮುಂದಿನ ಒಂದೆರಡು ದಿನಗಳ ಕಾಲ ಧಾರಾಕಾರ ಮಳೆಯ ಸಾಧ್ಯತೆಯಿದೆ.
ಏ.15ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯ ಅಲ್ಲಲ್ಲಿ, ಆಗುಂಬೆ ಸುತ್ತಮುತ್ತ, ತುಮಕೂರು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಭರ್ಜರಿ ಮಳೆಯ ಸಾಧ್ಯತೆ ಇದೆ.
ಕಾಸರಗೋಡು ಜಿಲ್ಲೆ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರಿಯಾಗಿ ಮಳೆಯ ಮುನ್ಸೂಚನೆ ಇದೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಪಾವಗಢ, ಧಾರವಾಡ, ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಯೂ ಮಳೆಯ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ತುಂತುರು ಮಳೆಯಾಗಲಿದೆ.