ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎ.16 ಮತ್ತು 17 ರಂದು ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
- ಬಸ್ ನಿಲ್ದಾಣದ ಕಡೆಯಿಂದ ಬರುವ ಎಲ್ಲಾ ವಾಹನಗಳು ರಸ್ತೆಯಿಂದ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ರಸ್ತೆಗೆ ತೆರಳಿ ಸಂಚರಿಸುವುದು.
- ಮಂಗಳೂರು ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನಿಂದ ಪರ್ಲಡ್ಕ, ದರ್ಬೆ, ಎಪಿಎಂಸಿ ರಸ್ತೆಯ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
- ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳು ಬೊಳುವಾರು ಅಂಜನೇಯ ಮಂತ್ರಾಲಯದ ಮೂಲಕ ಕೊಂಬೆಟ್ಟು ಶಾಲೆ ಮೈದಾನಕ್ಕೆ ಬರುವುದು.
- ಬಂಟರ ಭವನದ ಬಳಿ ರಸ್ತೆಯ ಮೂಲಕ ಕೊಂಬೆಟ್ಟು ಪಾರ್ಕಿಂಗ್‌ಗೆ ಬರುವುದು, ಹಾಗೂ ಪಾರ್ಕಿಂಗ್‌ನಿಂದ ಹಿಂತಿರುಗುವಾಗ ಕೊಂಬೆಟ್ಟು ಶಾಲಾ ಹಿಂದಿನ ರಸ್ತೆಯ ಮೂಲಕ ಉಪ್ಪಿನಂಗಡಿ ಹಾಗೂ ಇತರ ಕಡೆಗಳಿಗೆ ತೆರಳುವುದು.
- ಪುತ್ತೂರು ನಗರದ ನಿವಾಸಿಗಳು ತಮ್ಮ ನಿವಾಸಕ್ಕೆ ಹಿಂತಿರುವಾಗ ಆಧಾರ್ ಕಾರ್ಡ್ ಅಥವಾ ಗುರುತಿನ ಕಾರ್ಡ್ ಪ್ರತಿಯನ್ನು ತಪ್ಪದೇ ತಮ್ಮ ಜೊತೆಯಲಿ ಇಟ್ಟುಕೊಳ್ಳುವುದು, ಮಂಗಳೂರು ಕಡೆಯಿಂದ ಬರುವ ಘನ ವಾಹನಗಳು, ಲಿನೆಟ್ ಜಂಕ್ಷನ್‌ನಿಂದ ಬೊಳುವಾರು ಕಡೆಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು ಬೈಪಾಸ್ ಮೂಲಕವೇ ಸಂಚರಿಸುವುದು.
- ಮಂಗಳೂರು ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮಂಜಲ್ಪಡ್ಪು ಲಿನೆಟ್ ಜಂಕ್ಷನ್‌ನಿಂದ ಬೈಪಾಸ್ ರಸ್ತೆಯ ಮೂಲಕ ಸಾಗಿ ದರ್ಬೆ ಅಶ್ವಿನಿ ಸರ್ಕಲ್‌ನಿಂದ ದರ್ಬೆ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
ಪಾರ್ಕಿಂಗ್‌ಗೆ ಗುರುತಿಸಲಾದ ಸ್ಥಳಗಳು:
- ಪಡೀಲು ಕೊಟೇಚಾ ಹಾಲ್ ಬಳಿಯಿಂದ ಸಾಲ್ಮರ ಮೂಲಕ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಳ ಹಾಗೂ ರೈಲ್ವೇ ಗೇಟ್ ಬಳಿ ಪಾರ್ಕಿಂಗ್ ಮಾಡುವುದು
- ವಿಟ್ಲ-ಮಂಗಳೂರು ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್‌ನಿಂದ ಬೈಪಾಸ್ ರಸ್ತೆಯ ಮೂಲಕ ಸಾಗಿ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳು ಆದರ್ಶ ಆಸ್ಪತ್ರೆಯ ಹಿಂದುಗಡೆ ಖಾಸಗಿ ಸ್ಥಳದಲ್ಲಿ ಮತ್ತು ಹಾರಾಡಿ ರೈಲ್ವೆ ಬ್ರಿಡ್ಜ್ ಬಳಿ ಖಾಲಿ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
- ಸವಣೂರು, ಬೆಳ್ಳಾರೆ, ಸುಳ್ಯ ಕಡೆಯಿಂದ ಬರುವ ವಾಹನಗಳು ಅಶ್ವಿನಿ ಸರ್ಕಲ್‌ನಿಂದ ಬೈಪಾಸ್ ರಸ್ತೆ ಮೂಲಕ ಸಾಗಿ ಕಿಲ್ಲೇ ಮೈದಾನಕ್ಕೆ ಬಂದು ಪಾರ್ಕಿಂಗ್ ಮಾಡುವುದು.
- ಸುಬ್ರಹಣ್ಯ, ಪಾಣಾಜೆ ಆಸುಪಾಸಿನಿಂದ ಬರುವ ವಾಹನಗಳು ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಆವರಣದಲ್ಲಿಯೂ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ:
ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ, ಕೊಂಬೆಟ್ಟು ಶಾಲೆಯಿಂದ ದೇವಸ್ಥಾನದ ಕಡೆಗೆ ಬರುವ ರಸ್ತೆ, ಆದರ್ಶ ಆಸ್ಪತ್ರೆಯ ಎದುರಿನಿಂದಾಗಿ ದೇವಸ್ಥಾನಕ್ಕೆ ತೆರಳುವ ರಸ್ತೆ, ಹಾರಾಡಿ ರೈಲ್ವೆ ಬ್ರಿಡ್ಜ್ ಕಡೆಯಿಂದ ರೈಲ್ಲಿ, ಸ್ಟೇಶನ್ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.