ಪುತ್ತೂರು: ಜಾತ್ರೆಯ ಗದ್ದೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೇತೃತ್ವದಲ್ಲಿ ರಕ್ಷಣಾ ತಂಡದ ಮೂಲಕ ಚೈಲ್ಡ್ ಲೈನ್-1098 ರಕ್ಷಣೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಗದ್ದೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಕುರಿತು ಇಲಾಖೆಯ ಗಮನಕ್ಕೆ ಬಂದ ಈ ಹಿನ್ನೆಲೆಯಲ್ಲಿ ಜಿಲ್ಲಾಮಕ್ಕಳ ರಕ್ಷಣಾ ಘಟಕದ ನೇತ್ರತ್ವದಲ್ಲಿ ರಕ್ಷಣಾ ತಂಡದ ಮೂಲಕ ಚೈಲ್ಡ್ ಲೈನ್-1098 ದಕ.ಜಿಲ್ಲಾ ಸಿಬ್ಬಂದಿಗಳು, ಜಿಲ್ಲಾಮಕ್ಕಳ ರಕ್ಷಣಾ ಘಟಕ ದಕಜಿಲ್ಲೆ, ಕಾರ್ಮಿಕ ಇಲಾಖೆ ದ.ಕ.ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ.ಜಿಲ್ಲೆ, ಹಾಗೂ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಹಕಾರದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ 13 ವರ್ಷ ಪ್ರಾಯದ ಕನ್ನೂರು ಮೂಲದ 2 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪುನರ್ವಸತಿ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಚೈಲ್ಡ್ ಲೈನ್ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿಯಾದ ಅಸುಂತ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ಅಧಿಕಾರಿಯಾದ ಕುಮಾರ್ ಶೆಟ್ಟಿಗಾರ್, ಅಸಾಂಸ್ಥಿಕ ಅಧಿಕಾರಿಯಾದ ವಝೀರ್, ಆಪ್ತಸಮಾಲೋಚಕಿ ಪ್ರತಿಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಮತ್ತು ಸುಜಾತ ಮಹಿಳಾ ಠಾಣೆಯ ಸಿಬ್ಬಂದಿಯಾದ ದಿನೇಶ್, ಹಾಗೂ ಸ್ವಯಂ ಸೇವಕರಾರ ಲೋಕೇಶ್ ಅಲ್ಬುಡ, ಮತ್ತು ಸ್ಟ್ಯಾನ್ಲಿ ರವರು ಜೊತೆಗಿದ್ದರು.
ಮಕ್ಕಳ ಭಿಕ್ಷಾಟನೆಗೆ ಅವಕಾಶ ನೀಡಬೇಡಿ:
ದ.ಕ.ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮಕ್ಕಳ ಭಿಕ್ಷಾಟನೆಯ ದಂದೆಯು ಹೆಚ್ಚಾಗುತ್ತಿದ್ದು, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳದಂತೆ ಮಾನ್ಯ ಘನಸರ್ಕಾರದ ಆದೇಶವಿದ್ದರೂ ಕೂಡ ವಲಸೆಕಾರ್ಮಿಕರು ಏಜೆಂಟ್ ಗಳ ಮೂಲಕ ರಾಜಾರೋಷವಾಗಿ ಭಿಕ್ಷಾಟನೆ ಯ ದಂದೆಯಲ್ಲಿ ಮಕ್ಕಳನ್ನ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಸಾರ್ವಜನಿಕರು ಅಪ್ತಾಪ್ತ ವಯಸ್ಸಿನ ಮಕ್ಕಳು ಬೆಲೂನ್ ಮಾರಾಟದ ನೆಪದಲ್ಲಿ ಭಿಕ್ಷಾಟನೆ ನಡೆಸುತ್ತಿರುವುದು ಕಂಡು ಬಂದಲ್ಲಿ ಕೂಡಲೇ ಚೈಲ್ಡ್ ಲೈನ್ -1098 ಕ್ಕೆ ಕರೆಮಾಡಿ ಮಾಹಿತಿ ನೀಡುವ ಮೂಲಕ ಮಕ್ಕಳ ಭಿಕ್ಷಾಟನೆ ಮುಕ್ತ ನಗರವನ್ನಾಗಿಸಲು ಸಹಕರಿಸಿ.
ದೀಕ್ಷಿತ್ ಅಚ್ರಪ್ಪಾಡಿ-ಜಿಲ್ಲಾ ಸಂಯೋಜಕ, ಚೈಲ್ಡ್ ಲೈನ್ 1098 ದ.ಕ.ಜಿಲ್ಲೆ.