ಪುತ್ತೂರು: ಯುವ ನಿರ್ದೇಶಕ ಅಕ್ಷಯ್ ನಾಯಕ್ ರವರು ಈಗಾಗಲೇ ಹಲವಾರು ಕಲಾ ಪ್ರತಿಭೆಗಳಿಗೆ, ಬಾಲ ಕಲಾವಿದರಿಗೆ, ಸಾಹಿತಿಗಳಿಗೆ, ಉತ್ತಮ ವೇದಿಕೆಯನ್ನು ನೀಡಿ ಅವರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ಕಿರುಚಿತ್ರ, ಭಕ್ತಿ ಗೀತೆಗಳ ಧ್ವನಿ ಸುರುಳಿ ಹಾಗೂ ಅಂತು ಎಂಬ ಕೊಂಕಣಿ ಚಲನಚಿತ್ರವನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಓರ್ವ ಉದಯೋನ್ಮುಖ ನಿರ್ದೇಶಕ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು ‘ಕಾರ್ಣಿಕದ ತುಡರ್’ ಕೊರಗಜ್ಜನ ತುಳು ಭಕ್ತಿಗೀತೆ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ತುಳುನಾಡಿನ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜನ ಕುರಿತಾದಂತಹ ಭಕ್ತಿ ಪ್ರಧಾನ ಗೀತೆ ‘ಕಾರ್ಣಿಕದ ತುಡರ್’ ಎಂಬ ತುಳು ಭಕ್ತಿಗೀತೆಯು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಶ್ರೀ ಪಾರ್ವತಿ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು.
ಯುವ ನಿರ್ದೇಶಕ ಕರೋಪಾಡಿ ಅಕ್ಷಯ್ ನಾಯಕ್ ರವರ ಶ್ರೀ ಮಹಮ್ಮಾಯಿ ಸಿನಿ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬಂದ್ದಿದ್ದು, ಈ ತುಳು ಭಕ್ತಿ ಗೀತೆ ಝೀ ಕನ್ನಡದ ಸರಿಗಮಪ ಖ್ಯಾತಿಯ ಅಖಿಲಾ ಪಜಿಮಣ್ಣ ಸುಮಧುರ ಕಂಠದಲ್ಲಿ ಮೂಡಿ ಬಂದಿದೆ. ಖ್ಯಾತ ತಬಲಾ ವಾದಕರಾದ ಆತ್ಮಾರಾಮ್ ನಾಯಕ್ ಇವರ ವಾದ್ಯ ಸಂಯೋಜನೆಯೊಂದಿಗೆ, ವಿನಯ್ ರಂಗದೊಳ್ ಮೈಸೂರು ಇವರ ಸಂಗೀತ ಸಂಯೋಜನೆಯಲ್ಲಿ ,ವಿಕ್ರಮ್ ನಾಯಕ್ (ಶ್ರೀವಿ ಕ್ರಿಯೇಷನ್ಸ್) ರವರ ಛಾಯಾಗ್ರಹಣ ಮತ್ತು
ಮನು ಶಿವನಗರ ರವರು ಸಾಹಿತ್ಯ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್,ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಯುವ ನಿರ್ದೇಶಕ ಕರೋಪಾಡಿ ಅಕ್ಷಯ್ ನಾಯಕ್, ಗಾಯಕ ದೀಪಕ್ ಪೈ, ಸುದರ್ಶನ್ ಪುತ್ತೂರು ಅತಿಥಿಗಳನ್ನು ಸ್ವಾಗತಿಸಿ, ಯುವ ಸಾಹಿತಿ ಮನುಕುಮಾರ್ ಶಿವನಗರ ನಿರೂಪಣೆ ಗೈದರು.